ಲೋಕಸಭಾ ಅಭ್ಯರ್ಥಿ ಪಟ್ಟಿಯಲ್ಲಿ ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಹೆಸರು ಮುಂಚೂಣಿಯಲ್ಲಿ – ದ.ಕ ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ

ಮಂಗಳೂರು: ಅಚ್ಚರಿಯ ಬೆಳವಣಿಗೆ ಒಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೆಸರು ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರಿನಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ.
  ಕಾಂಗ್ರೆಸ್ ಹೈಕಮಾಂಡ್ ಪಟ್ಟಿಯಲ್ಲಿ ಪ್ರತಿಭಾ ಕುಳಾಯಿ ಹೆಸರು ಅಗ್ರಸ್ಥಾನದಲ್ಲಿ ಇದೆ ಎಂದು ತಿಳಿದುಬಂದಿದೆ.
ಬಹುತೇಕ ಸರ್ವೇಗಳಲ್ಲಿ ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಹೆಸರನ್ನು ಕಾರ್ಯಕರ್ತರು ಸೂಚಿಸಿದ್ದು ಇದು ಹೈಕಮಾಂಡಿನ ಅಚ್ಚರಿಗೆ ಕಾರಣವಾಗಿದ್ದು.ಈ ನೆಲೆಯಲ್ಲಿ ರಾಜ್ಯದ ಹಿರಿಯ ರೊಬ್ಬರ ಪ್ರಕಾರ ಬಹುತೇಕ ಪ್ರತಿಭಾ ಕುಳಾಯಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಪಕ್ಕ ಎನ್ನಲಾಗುತ್ತಿದೆ.ಪ್ರತಿಭಾ ಕುಳಾಯಿ ಪ್ರತಿಭಾನ್ವಿತ ಕಾಂಗ್ರೆಸ್ ನಾಯಕಿಯಾಗಿದ್ದು, ಹಲವಾರು ಮುಂಚೂಣಿ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ನಡೆಸಿದ ಮೂರು ಸರ್ವೆಗಳಲ್ಲಿ ಉಳಿದ ಅಭ್ಯರ್ಥಿಗಳಿಗಿಂತ ಪ್ರತಿಭಾ ಕುಳಾಯಿ ಹೆಸರು ಮುಂಚೂಣಿಗೆ ಬಂದಿರುವುದು ಈಗ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿಗಳ ವಿಷಯದಲ್ಲಿ ಹೊಸ ತಿರುವನ್ನು ಪಡೆದುಕೊಂಡಿದೆ.

Leave a Reply