
ಪುತ್ತೂರು: ಮಾಣಿ ಮೈಸೂರು ರಾಷ್ಟ್ರಿಯ ಹೆದ್ದಾರಿಯು ಅಂತರಾಜ್ಯವನ್ನು ಸಂಪರ್ಕಿಸುವ ಹೆದ್ದಾರಿಯಾಗಿದ್ದು ದಿನನಿತ್ಯ ವಾಹನ ದಟ್ಟಣೆಯಿಂದ ಕೂಡಿದ್ದು ಈಗಾಗಲೇ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಹೊಂದುವ ನಿರಿಕ್ಷೆಯಲ್ಲಿದೆ ಈ ರಸ್ತೆಯ ಅಪಘಾತ ಕೇಂದ್ರ ವಾಗಿದ್ದ ಸಂಟ್ಯಾರ್ ಸೇತುವೆಗೆ ಈಗಾಗಲೇ ಮುಕ್ತಿ ಸಿಕ್ಕಿದ್ದು ಹೊಸ ಸೇತುವೆ ನಿರ್ಮಾಣವಾಗಿದೆ.



ಈ ನಡುವೆ ಕಲ್ಲರ್ಪೆ ಬಸ್ಸು ನಿಲ್ದಾಣ ಬಳಿಯ ಅಪಾಯಕಾರಿ ತಿರುವು ಮೃತ್ಯು ಕೂಪವಾಗಿ ಬದಲಾಗಿದೆ ಈಗಾಗಲೇ ಈ ತಿರುವು ಮತ್ತು ಅದರ ಪಕ್ಕದಲ್ಲಿ ನಡೆದ ಅಪಘಾತದಲ್ಲಿ ಏಲೆಂಟು ಜೀವಗಳು ಈಗಾಗಲೇ ಬಲಿಯಾಗಿದ್ದು. ನಿನ್ನೆಯಷ್ಟೇ ನಡೆದ ಬೈಕ್ ಮತ್ತು ಟಿಪ್ಪರ್ ಅಪಘಾತದಲ್ಲಿ ಕೆಲಸದ ನಡವೆ ಊಟದ ಬಿಡುವಿನ ಸಮಯದಲ್ಲಿ ತನ್ನ ಮನೆಗೆ ಬಂದಿದ್ದ ಕುಟುಂಬಕ್ಕೆ ಆದಾರ ಸ್ಥಂಬವಾಗಿದ್ದ ಚಿರ ಯುವಕ ಬೈಕ್ ತಿರುಗಿಸುವ ಸಂದರ್ಭದಲ್ಲಿ ಬಲಿಯಾಗಿದ್ದಾನೆ.ಈ ಹೆದ್ದಾರಿಯ ಕಲ್ಲರ್ಪೆ ಬಸ್ಸು ನಿಲ್ದಾಣದಿಂದ ಮೆಲ್ಬಾಗಕ್ಕೆ ಹೋಗುವ ಒಳ ರಸ್ತೆ ಮಲಾರ್ ಕಡೆ ಸಂಪರ್ಕಿಸುತ್ತದೆ ಮತ್ತು ಕೆಲಬಾಗದ ಒಳ ರಸ್ತೆ ನೀರ್ಕಜೆ ಕಡೆ ಸಂಪರ್ಕಿಸುತ್ತಿದ್ದು ಆಗಾಗಿ ರಸ್ತೆ ದಾಟುವ ಸಾರ್ವಜನಿಕರು,ವಾಹನ ಸವಾರರು ರಸ್ತೆ ಡಾಟಲು ಸಂಕಷ್ಟ ಅನುಭವಿಸುತ್ತಿದ್ದು ಈ ಬ್ರಹತ್ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಗೋಚರಿಸದ ಪರಿಣಾಮ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು ಇಲ್ಲಿಂದ ನೂರು ಮೀಟರ್ ದೂರದಲ್ಲಿ ಮಸೀದಿ ಮತ್ತು ಸರಕಾರಿ ಪ್ರಾಥಮಿಕ ಶಾಲೆ ಇದ್ದು ವಿದ್ಯಾರ್ಥಿಗಳು ರಸ್ತೆ ಡಾಟಲು ಮತ್ತು ರಸ್ತೆ ಬದಿ ನಡೆದುಕೊಂಡು ಹೋಗಲು ಆತಂಕ ಪಡುವಂತಾಗಿದೆ ಆದ್ದರಿಂದ ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಸ್ಥಳೀಯ ಶಾಸಕರು ಮತ್ತು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಈ ಕೂಡಲೇ ಎಚ್ಚೆತುಕೊಂಡು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರ ಒಕ್ಕೊರಲ ಅಗ್ರಹವಾಗಿದೆ.. ಎಂದು ಸಾಮಾಜಿಕ ತಾಣಗಳ ಮೂಲಕ ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ ಯವರಲ್ಲಿ ರಿಯಾಝ್ ಬಳಕ್ಕರವರು ಮನವಿ ಮಾಡಿದ್ದಾರೆ..