ಅದ್ದೂರಿಯಾಗಿ ನಡೆದ ತಾಯಿಫ್ ನೈಟ್ 2024 ಗೇಮ್ಸ್ ಫೆಸ್ಟಿವಲ್

ಸೌದಿ ಅರೇಬಿಯಾದ ತಾಯಿಫ್ ನಲ್ಲಿ ಕಾರ್ಯಾಚರಿಸುತ್ತಿರುವ ತಾಯಿಫ್ ಫೈಟರ್ಸ್ ಸ್ಪೋರ್ಟ್ ಕ್ಲಬ್ ಇದರ ದಶವಾರ್ಷಿಕದ ಅಂಗವಾಗಿ ಫೆಬ್ರವರಿ 16 ರಂದು ತಾಯಿಫ್ ನ ಹಲಗ ಎಂಬಲ್ಲಿ ಏರ್ಪಡಿಸಲಾಗಿದ್ದ ತಾಯಿಫ್ ನೈಟ್-24 ಗೇಮ್ಸ್ ಫೆಸ್ಟಿವಲ್ ವಿಜೃಂಭಣೆಯಿಂದ ಜರುಗಿತು.

ಮೂವತ್ತೈದರಷ್ಟು ಅನಿವಾಸಿ ಫ್ಯಾಮಿಲಿಗಳ ಸಮೇತ ನೂರಾರು ಜನರು ಭಾಗವಹಿಸಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಅಲ್ತಾಫ್ ಗುರುಪುರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅಝ್ವೀರ್ ಗಾಣೆಮಾರ್ ಸಮಾರಂಭವನ್ನು ಉದ್ಘಾಟಿಸಿದರು.
ಅಬ್ದುರ್ರಝಾಕ್ ಕೊಡಂಗಾಯಿ ಗಣ್ಯಾತಿಥಿಗಳು ಮತ್ತು ಸಭಿಕರನ್ನು ಸ್ವಾಗತಿಸಿದರು.
ಕ್ಲಬ್ ಅಧ್ಯಕ್ಷರಾದ ಮನ್ಸೂರ್ ಗುರುಪುರ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು.

ಹಫೀಝ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು. ಸಲೀಂ ಪರ್ತಿಪ್ಪಾಡಿ ವಂದಿಸಿದರು.

ಸನ್ಮಾನ ಕಾರ್ಯಕ್ರಮ

ಸದ್ರಿ ಸಂಘದ ಸ್ಥಾಪಕ ಸದಸ್ಯರೂ, ಹಿರಿಯರೂ ಆಗಿರುವ ಉತ್ತಮ ಸಮಾಜ ನಿರ್ಮಾಣದ ಕ್ರಿಯೆಗಳಿಗೆ ಸಹಕಾರಿಯಾಗುವ ಸಿದ್ದೀಕ್ ಚಿಪ್ಪಾರು ಅವರನ್ನು ಸ್ಮರಣೆ ಕೆ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು ಹಾಗೂ ತ್ವಾಯಿಫ್ ನಲ್ಲಿರುವ ಹಲವಾರು ಸಂಘ ಹಾಗು ಸಂಸ್ಥೆಗಳಿಗೆ ಶಕ್ತಿ ತುಂಬುವ ಮೂಲಕ ಕ್ರೀಡೆ ಹಾಗೂ ಸಾಮಾಜಿಕ ಸೇವೆಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿರುವ ನಮ್ಮ ಸಂಘದ ಶಕ್ತಿ ಎಂ.ಕೆ.ರಝಾಕ್ ಕೊಡಂಗಾಯಿ ಇವರಿಗೂ 10ನೇ ವರ್ಷದ ಸಂಭ್ರಮದಲ್ಲಿ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಶೀದ್ ವಳಚಿಲ್, ಅನಸ್ ಕುದ್ಲೂರು, ದಾವೂದ್ ಗುರುಪುರ, ಅನ್ಸಾರ್ ಅಡ್ಡೂರ್ (otaibi), ಅನ್ಸಾರ್ ಬಜಾಲ್, ಸಲೀಮ್ ಪಳ್ಳಕುಡಲ್, ಮಲಿಕ್ ಇಡ್ಯಾ, ಕ್ಲಬ್ ನಾಯಕ ಸಲೀಂ ಸೂರಿಂಜೆ, ಫವಾಝ್ ಬಾಯಾರ್, ಮತ್ತು ನೌಫಲ್ ಬೆಂಗ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂದ್ಯಾಟಗಳು, ಗುಂಪು ಆಟ, ಮನರಂಜನಾ ಕಾರ್ಯಕ್ರಮಗಳು ಅಮೋಘವಾಗಿ ಜರುಗಿದವು.

ತಾಯಿಫ್ ನೈಟ್-24 ಗೇಮ್ಸ್ ಫೆಸ್ಟಿವಲ್ ಕ್ರೀಡಾಕೂಟದ ಚಾಂಪಿಯನ್ಸ್ & ರನ್ನರ್ಸ್

ಫೆಬ್ರವರಿ 1 ರಂದು ಆರಂಭವಾಗಿದ್ದ ತಾಯಿಫ್ ನೈಟ್ 2024 ಫೆಬ್ರವರಿ 23 ರ ತನಕ ರಜಾದಿನಗಳಲ್ಲಿ ವಿವಿಧ ಪಂದ್ಯಾವಳಿಗಳ ಮೂಲಕ ಜರುಗಿತ್ತು.

ವಿಜೇತರು:

ತಾ: 1-2-2024 ರಂದು ಐದು ತಂಡಗಳು ಭಾಗವಹಿಸಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ರಝಾಕ್ ಕೊಡಂಗಾಯಿ ನಾಯಕತ್ವದ ತಾಯಿಪ್ ನೈಟ್ ರೈಡರ್ಸ್ ತಂಡವು ಪ್ರಥಮ ಸ್ಥಾನವನ್ನು ಪಡೆಯಿತು. ಅಲ್ತಾಫ್ ಗುರುಪುರ ನೇತೃತ್ವದ ಹಿಲಾಲ್ ಬ್ರದರ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು.
ತಾ. 15-2-2024 ರಂದು ಏಳು ತಂಡಗಳು ಭಾಗವಹಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಅಝ್ವೀರ್ ಗುರುಪುರ ನೇತೃತ್ವದ ಫ್ರೆಂಡ್ಸ್ ತಾಯಿಫ್ ತಂಡವು ಪ್ರಥಮ ಸ್ಥಾನ ಪಡೆಯಿತು. ಅಝ್ವೀರ್ ಗಾಣೆಮಾರ್ ನೇತೃತ್ವದ ಬ್ಲೋಕ್ ಮಾಸ್ಟರ್ಸ್ ತಂಡವು ದ್ವಿತೀಯ ಸ್ಥಾನ ಗಳಿಸಿತು.
ಅದೇ ದಿನ ನಡೆದ ಆರು ತಂಡಗಳು ಭಾಗವಹಿಸಿದ ಕಬಡ್ಡಿ ಪಂದ್ಯಾಟ ಫೈನಲ್ ತನಕ ತಲುಪಿದಾಗ ಮಳೆಯ ಅಡಚಣೆಯಿಂದಾಗಿ ಪಂದ್ಯಾಟವನ್ನು ರದ್ದುಗೊಳಿಸಲಾಗಿತ್ತು. 23-2-2024 ರಂದು ಟಾಸ್ ಮೂಲಕ ವಿಜಯಿ ತಂಡವನ್ನು ಆಯ್ಕೆ ಮಾಡಲಾಯಿತು. ನೌಫಲ್ ಅಮ್ಮಿ ಕರ್ವೇಲ್ ನಾಯಕತ್ವದ ಸೆವೆನ್ ಸ್ಟಾರ್ಸ್ ತಂಡ ಪ್ರಥಮಸ್ಥಾನಕ್ಕೆ ಪಾತ್ರವಾಯಿತು.
ದಾವೂದ್ ಗುರುಪುರ ನಾಯಕತ್ವದ ತಂಡ ದ್ವಿತೀಯ ಸ್ಥಾನಕ್ಕೆ ಅರ್ಹವಾಯಿತು.
23-2-2024ರಂದು ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ 4 ತಂಡಗಳು ಭಾಗವಹಿಸಿದ್ದವು. ಸಲೀಂ ಪರ್ತಿಪ್ಪಾಡಿ ನಾಯಕತ್ವದ ಜಿಗ್’ರ್ ಫ್ರೆಂಡ್ಸ್ ತಾಯಿಫ್ ಪ್ರಥಮ ಸ್ಥಾನ ಪಡೆಯಿತು.
ಮನ್ಸೂರ್ ಗುರುಪುರ ನೇತೃತ್ವದ ಚಾಲೆಂಜಿಂಗ್ ಬಾಯ್ಸ್ ತಾಯಿಫ್ ಎರಡನೆಯ ಸ್ಥಾನ ಪಡೆಯಿತು.
ಎಲ್ಲಾ ಪಂದ್ಯಾಟಗಳಲ್ಲೂ ತಂಡಗಳ ನಡುವಿನ ಬಿರುಸಿನ ಹೋರಾಟ ಹಾಗೂ ಜಿದ್ದಾಜಿದ್ದ ಹಣಾಹಣಿ ಪ್ರೇಕ್ಷಕರನ್ನು ರಂಜಿಸಿತ್ತು.

Leave a Reply