October 23, 2025
WhatsApp Image 2024-02-25 at 4.46.22 PM

ಮಂಗಳೂರು: ಪಿ.ಎಚ್.ಡಿ‌ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಉಳ್ಳಾಲ ಪೊಲೀಸರಿಗೆ ಚೈತ್ರಾಳ ದ್ವಿಚಕ್ರ ವಾಹನ ಸುರತ್ಕಲ್ ಬಳಿ ಪತ್ತೆಯಾಗಿದೆ.

ಚೈತ್ರಾ ಫೆ.17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದು ಮೊಬೈಲ್ ಪಂಪ್ ವೆಲ್ ಬಳಿ ಸ್ವಿಚ್ಡ್ ಆಫ್ ಆಗಿತ್ತು. ಸದ್ಯ, ಚೈತ್ರಾ ಕೇರಳ ಅಥವಾ ಬೆಂಗಳೂರು ಕಡೆ ಇರುವ ಅನುಮಾನ ವ್ಯಕ್ತವಾಗಿದೆ. ಇನ್ನೊಂದೆಡೆ, ಡ್ರಗ್ ಪ್ರಕರಣದಲ್ಲಿ ಭಾಗಿಯಾಗಿರುವ ಶಾರೂಕ್ ಮೊಬೈಲ್ ಕೂಡ ಸ್ವಿಚ್ಡ್​ ಆಫ್ ಆಗಿರುವ ಕಾರಣ ಲವ್​ಜಿಹಾದ್ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣ ಸಂಬಂಧ ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಬಗ್ಗೆ ಮಾತನಾಡಿದ ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನ ಬ್ಲ್ಯಾಕ್ ಮೇಲ್ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರ್ ಈ ಬಗ್ಗೆ  ಮಾತನಾಡಿದ್ದು, ಹುಡುಗರು ರಾತ್ರಿ ಹೊತ್ತು ಪಿಜಿ ಬಳಿ‌ ಬರುತ್ತಿರುವ ಬಗ್ಗೆ 10 ದಿನದ ಹಿಂದೆ ಸ್ಥಳಯರಿಂದ ಮಾಹಿತಿ ಬಂದಿತ್ತು. ಚೈತ್ರಾ ಹೆಬ್ಬಾರ್ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದವಳು. ಈಕೆಗೆ ಶಾರೂಕ್ ಎಂಬ ಯುವಕನ ಜೊತೆ ನಿಕಟ ಸಂಪರ್ಕ ಇತ್ತು. ಶಾರೂಕ್ ಗಾಂಜಾ ಡ್ರಗ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡವ. ಡ್ರಗ್ಸ್​‌ನ ಆಸೆ ಆಮೀಷ ತೋರಿಸಿ ಬ್ರೈನ್ ವಾಶ್ ಮಾಡಿದ್ದಾನೆ. ಇದು ಲವ್ ಜಿಹಾದ್ ದೊಡ್ಡ ಷಡ್ಯಂತ್ರ ಇದೆ ಎಂದಿದ್ದಾರೆ.

About The Author

Leave a Reply