January 16, 2026
WhatsApp Image 2024-02-27 at 10.46.37 AM

ಸುಳ್ಯ: ಅಕ್ರಮವಾಗಿ ಗೋ ಸಾಗಾಟ ಮಾಡಿದ ಆರೋಪದಲ್ಲಿ ಪೊಲೀಸರು ಓರ್ವನನ್ನು ಬಂಧಿಸಲಾಗಿದ್ದು, ಜಾನುವಾರು ಸಹಿತ ವಾಹನ ವಶಪಡಿಸಿಕೊಂಡಿದ್ದಾರೆ. ರವಿವಾರ ರಾತ್ರಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನೆಲೆಯಲ್ಲಿ ಸುಳ್ಯ ನಗರ ಬಜರಂಗದಳದ ಕಾರ್ಯಕರ್ತರು ವಾಹನವೊಂದನ್ನು ಸುಳ್ಯದ ಜ್ಯೋತಿ ಸರ್ಕಲ್ ಬಳಿ ತಡೆದು ನಿಲ್ಲಿಸಿದ್ದರು. ಈ ವೇಳೆ ವಾಹನದಲ್ಲಿ ಮೂರು ಜಾನುವಾರುಗಳು ಕಂಡು ಬಂದಿದೆ. ಕೂಡಲೇ ಮಾಹಿತಿ ಪಡೆದ ಸುಳ್ಯ ಎಸೈ ಈರಯ್ಯ ದೂಂತೂರು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿ ಸುಲ್ತಾನ್ ಬತ್ತೇರಿಯ ಬಿಬಿನ್ ಪೌಲೋಸ್ ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

About The Author

Leave a Reply