October 12, 2025
WhatsApp Image 2024-02-27 at 4.25.34 PM

ಬೆಳ್ಮಣ್: ಕಜೆ ಕುಕ್ಕುದಡಿ ಮಾರಿಗುಡಿ ಎಂದೇ ಪ್ರಸಿದ್ಧಿ ಪಡೆದ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯೀ ಅಮ್ಮನವರ ದೇವಸ್ಥಾನ ಸಂಪೂರ್ಣ ಶಿಲಾಮಯಗೊಂಡಿದ್ದು, ಫೆ. 22ರಿಂದ 28ರವರೆಗೆ ಬ್ರಹ್ಮಕಲಾಶಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಾ ಇದೆ. ಈ ಕಾರ್ಯಕ್ರಮಗಳಲ್ಲಿ ಹಿಂದೂ ಮುಸ್ಲಿಮರೆನ್ನದೆ, ಸೌಹಾರ್ದಯುತವಾಗಿ ಎಲ್ಲಾ ಜಾತಿ ಧರ್ಮದವರು ಒಂದಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡದಲ್ಲದೆ, ದಿನಂಪ್ರತಿ ನಡೆಯುವ ಧಾರ್ಮಿಕ ಸಭೆಯಲ್ಲಿ ಎಲ್ಲಾ ಧರ್ಮದ ಸಂತರು ಭಾಗವಹಿಸಿ ಆಶೀರ್ವಚನ ನೀಡಿ ಶುಭಹಾರೈಸಿದ್ದರು. ಹಾಗೂ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ಹಿಂದೂಯೇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಆದರೆ, ಫೆ. 26ರ ಸೋಮವಾರದಂದು ಬ್ರಹ್ಮಕಲಾಶಾಭಿಷೇಕದ ದಿನ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಉಡುಪಿಯ ಅದಮಾರು ಮಠದ ಹಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಮಾತ್ರ ತನ್ನ ಆಶೀರ್ವಚನದಲ್ಲಿ ಹಿಂದೂಯೇತರರನ್ನು ನಿಂದಿಸಿದಲ್ಲದೆ, ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಅವರು ಮಾತನಾಡುವ ಉಚ್ಛಾರಣೆಗೆ ವ್ಯಂಗ್ಯವಾಡಿ, ಏಕವಚನದಲ್ಲೇ ನಿಂದಿಸಿದ್ದಾರೆ. ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುವಲ್ಲಿ, ರಾಜಕೀಯ ಭಾಷಣದಂತಿದ್ದ ಅವರ ಮಾತು ಸಭೆಯಲ್ಲಿದ್ದವರನ್ನೇ ಬೆರಗುಗೊಳಿಸಿತು. ಸಮಾಜವನ್ನು ತಿದ್ದಿತೀಡಬೇಕಾದ ಹಾಗೂ ಶಾಂತಿ ಸಾಮರಸ್ಯವನ್ನು ಕಾಪಾಡುವ ಸಂತರೆ ಈ ರೀತಿಯಾಗಿ ವರ್ತಿಸಿದರೆ, ಸಮಾಜ ಎತ್ತ ಕಡೆ ಸಾಗಬಹುದು ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

About The Author

Leave a Reply