March 20, 2026
WhatsApp Image 2024-02-29 at 2.40.36 PM
ಕಾಪುವಿನ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಳಾಗಿ ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಕಾರು ಚಾಲಕ ನಾಗೇಶ್ (70) ಮೃತ ದುರ್ದೈವಿ.
ಕಾಪುವಿನ ಮೆಸ್ಕಾಂಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಇವರು, ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಕಾಪು ಎಸೈ ಅಬ್ದುಲ್ ಖಾದರ್, ಕ್ರೈಂ ಎಸೈ ಪುರುಷೋತ್ತಮ್ ಹಾಗೂ ಪೋಲಿಸರು, ಹೆದ್ದಾರಿ ಗಸ್ತು ಪಡೆ ಆಗಮಿಸಿದ್ದು, ಕಾರು ಹಾಗು ಲಾರಿಯನ್ನು ತೆರವುಗೊಳಿಸಿದ್ದಾರೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply