Visitors have accessed this post 261 times.
ಮಂಗಳೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಸೋಮವಾರ ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.
ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನ, ತೊಕ್ಕೊಟ್ಟು ಕೊರಗಜ್ಜನ ಕಟ್ಟೆ, ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರ ಭಟ್ನಗರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ, ಉಳ್ಳಾಲ ಕಾಪಿಕಾಡು ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಕಾಪಿಕಾಡು ಶ್ರೀ ಸತ್ಯನಾರಾಯಣ ಮಂದಿರಗಳಿಗೆ ತೆರಳಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳ್ಯಾರ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೋಮೇಶ್ವರ ಪುರಸಭೆ ಸದಸ್ಯರಾದ ದೀಪಕ್ ಪಿಲಾರ್, ಪುರುಷೋತ್ತಮ ಶೆಟ್ಟಿ, ದಿನೇಶ್ ಕುಂಪಲ, ಉಳ್ಳಾಲ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಸುರೇಶ್ ಭಟ್ನಗರ, ಉಮೇಶ್ ಶೆಟ್ಟಿ ಬೋಳಿಯಾರ್, ನಾಗೇಶ್ ಶೆಟ್ಟಿ ತೊಕ್ಕೊಟ್ಟು, ವಿನೋದ್ ಕೊಲ್ಯ, ಸುಕುಮಾರ್ ಕೊಲ್ಯ, ರೂಪೇಶ್ ಭಟ್ ನಗರ, ಧೂಮಣ್ಣ ಕೊಲ್ಯ, ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಬಾಲು ಕಾರ್ನವರ್, ಕಂಡಪ್ಪ ಕಾರ್ನವರ್, ಶ್ರೀ ಚೀರುಂಭ ದರ್ಶನ ಪಾತ್ರಿ ಅಪ್ಪು ಆತಾರ್, ತೀಯಾ ಸಮಾಜದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಪ್ರಮುಖರಾದ ದಿನೇಶ್ ಕುಂಪಲ, ಸದಾಶಿವ ಉಳ್ಳಾಲ್, ಚಂದ್ರ ತೊಕ್ಕೊಟ್ಟು, ಪ್ರೇಮ್ ನಾಥ್ ಕೊಲ್ಯ, ಪರಮೇಶ್ವರ ಉಳ್ಳಾಲ್, ಜಯಾನಂದ ಅಂಚನ್, ಮೋನಪ್ಪ ಶ್ರೀಯಾನ್, ಶಿವರಾಂ ತೊಕ್ಕೊಟ್ಟು, ಪ್ರಕಾಶ್, ಭಾಸ್ಕರ್ ತೊಕ್ಕೊಟ್ಟು, ಉಮೇಶ್ ಅಮೀನ್, ಪವನ್ ಕುಮಾರ್, ಸುರೇಶ್ ಭಟ್ನಗರ, ಚಂದ್ರ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.