Visitors have accessed this post 987 times.

ಲೋಕಸಭಾ ಚುನಾವಣೆ- ದಕ್ಷಿಣಕನ್ನಡ ಎರಡು ಪಕ್ಷದಿಂದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

Visitors have accessed this post 987 times.

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 11 ಅಭ್ಯರ್ಥಿಗಳಿಂದ 21 ನಾಮಪತ್ರ ಸಲ್ಲಿಕೆಯಾಗಿದೆ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ ಓರ್ವ ಅಭ್ಯರ್ಥಿ ಎರಡು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಸುಪ್ರಿತ್ ಕುಮಾರ್ ಪೂಜಾರಿ ಎಂಬವರು ಎರಡು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅವರು ಜನಹಿತ ಪಕ್ಷ ಮತ್ತು ಜೆಡಿಯು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಸುಪ್ರೀತ್ ಕುಮಾರ್ ಪೂಜಾರಿ ಈ ಹಿಂದೆಯೂ ಹಲವು ಚುನಾವಣೆಗಳಲ್ಲಿ ವಿವಿಧ ಪಕ್ಷ ಮತ್ತು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈ ಬಾರಿ ಅವರು ಎರಡು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದು, ಅಂತಿಮವಾಗಿ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಬಿಜೆಪಿ ಪಕ್ಷದ ಕ್ಯಾ. ಬೃಜೇಶ್ ಚೌಟ ಮತ್ತು ಕಾಂಗ್ರೆಸ್ ಪಕ್ಷದ ಆರ್.ಪದ್ಮರಾಜ್ ತಲಾ 4 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಕೆಆರ್​ಎಸ್​ನ ರಂಜಿನಿ ತಲಾ 2 ಸೆಟ್, ಬಿಎಸ್ಪಿಯ ಕಾಂತಪ್ಪ, ಉತ್ತಮ ಪ್ರಜಾಕೀಯ ಪಾರ್ಟಿಯ ಕೆ ಇ ಮನೋಹರ, ಕರುನಾಡು ಸೇವಕರ ಪಾರ್ಟಿಯ ದುರ್ಗಾಪ್ರಸಾದ್ ತಲಾ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ದೀಪಕ್ ರಾಜೇಶ್ ಕುವೆಲ್ಲೋ 3 ಸೆಟ್, ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ, ಸತೀಶ್ ಬಿ , ಮ್ಯಾಕ್ಷಿಂ ಪಿಂಟೋ- ತಲಾ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಅಭ್ಯರ್ಥಿಗಳಿಂದ ಒಟ್ಟು 21 ನಾಮಪತ್ರ ಸಲ್ಲಿಕೆಯಾಗಿದೆ.

Leave a Reply

Your email address will not be published. Required fields are marked *