
ಮಂಗಳೂರು : ಲೋಕಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಅಖಾಡ ಹಿಂದೆಂದಿಗಿಂತಲೂ ಕುತೂಹಲದ ಕೇಂದ್ರ ಬಿಂದುವಾಗಿದೆ. ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆಯೆನಿಸಿರುವ ದ.ಕ.ಜಿಲ್ಲೆಯನ್ನು ತನ್ನ ತೆಕ್ಕೆಗೆ ತರಲು ಕೈಪಕ್ಷ ಶತಾಯ ಗತಾಯ ಪ್ರಯತ್ನಕ್ಕೆ ಮುಂದಾಗಿದೆ. ಸದ್ದಿಲ್ಲದೆ ಎಡಪಕ್ಷಗಳು ಕಾಂಗ್ರೆಸ್ ಬೆನ್ನಿಗೆ ಬೆಂಬಲವಾಗಿ ನಿಂತಿವೆ. ಪ್ರತಿಷ್ಠೆ, ಪೈಪೋಟಿ ಪಕ್ಕಕ್ಕಿಟ್ಟು ಕೇಸರಿಯ ಭದ್ರಕೋಟೆಯನ್ನು ಬೇಧಿಸಲು ಎಡ ಪಕ್ಷಗಳು ಪಣ ತೊಟ್ಟಿವೆ. ಇದೀಗ ಚುನಾವಣಾ ಸ್ಪರ್ಧಾ ಕಣದಿಂದ ಹಿಂದೆ ಸರಿದು ಬಿಜೆಪಿಯನ್ನು ಸೋಲಿಸಲು ಎಸ್‌ಡಿಪಿಐ ಕೂಡಾ ಕಾಂಗ್ರೆಸ್ ಕೈಬಲಪಡಿಸಿದೆ. ಇದು ಮುಸ್ಲಿಂ ಮತಗಳು ಎಲ್ಲೂ ಆಚೀಚೆ ಆಗದೆ ಭದ್ರವಾಗಿ ಕೈ ವಶವಾಗುವುದು ಖಚಿತ. ಈ ಬಗ್ಗೆ ದಕ್ಷಿಣ ಕನ್ನಡ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.


