August 30, 2025
WhatsApp Image 2024-04-11 at 5.45.20 PM

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ,ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಅಬ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಮತ್ತು ಗೆಲುವಿಗೆ ಸಹಕಾರಿಯಾಗಲು ಕೆ.ಪಿ.ಸಿ‌.ಸಿ. ಕಾರ್ಯದ್ಯಾಕ್ಷರಾದ ಶ್ರೀ ಮಂಜುನಾಥ ಭಂಡಾರಿ ಶಿಪಾರಸ್ಸಿನ ಮೇರೆಗೆ ಕೆ.ಪಿ.ಸಿ.ಸಿ ಅದ್ಯಕ್ಷರಾದ ಶ್ರೀ. ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯೊಂದಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರಾಗಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಯವರನ್ನು ತಕ್ಷಣದಿಂದ ಕಾರ್ಯಪ್ರವರ್ತರಾಗುವಂತೆ ಈ ಮೂಲಕ ಆದೇಶಿಸಿಸಲಾಗಿದೆ..
ಶ್ರಿಯುತರು ಈ ಹಿಂದೆ ನಡೆದ ಹಲವಾರು ಸಾರ್ವತ್ರಿಕ ಚುನಾವಣೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಯಶಸ್ವಿಯಾಗಿದ್ದನ್ನು ಮನಗಂಡು ಪ್ರಮುಖ ಹುದ್ದೆ ಒಲಿದು ಬಂದಿದೆ.ವಿಟ್ಲ-ಉಪ್ಪಿನಂಗಡಿ,ಬಂಟ್ವಾಳ, ಪಾಣೆಮಂಗಳೂರು ಸಹಿತ ಜಿಲ್ಲೆಯ ವಿವಿಧ ವಿಧಾನ ಸಭಾ,ಜಿ.ಪಂಚಾಯತ್ ವ್ಯಾಪ್ತಿಯಲ್ಲಿ ಜವಾಬ್ದಾರಿ ನಿರ್ವಹಿಸಿದ ಇವರು ಪಕ್ಷ ಸಂಘಟನೆ ಮತ್ತು ಮತ ಕ್ರೂಡಿಕರಣವಾಗುಲ್ಲಿ ಪ್ರಮುಖ ಪಾತ್ರ ವಹಿಸಿ ಅಭ್ಯರ್ಥಿಗಳ ಗೆಲುವಿನ ರುವಾರಿಗಳಾಗಿರುತ್ತಾರೆ.ಅಲ್ಲದೆ ಸದ್ಯ ದಕ್ಷಿಣ ಕನ್ನಡ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಸಂಘಟನೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಸಮಾವೇಶ ನಡೆಸಿ ಗಮನಾರ್ಹ ಸಾದನೆ ಮಾಡಿರುತ್ತಾರೆ.

About The Author

Leave a Reply