Visitors have accessed this post 629 times.
ಮಂಗಳೂರು: ನಗರದ ಬೋಳಾರದಲ್ಲಿರುವ ಸಲೂನ್ ಮಾಲಕ ಎಡ್ವಿನ್ ವಿನಯ್ ಕುಮಾರ್ ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಬರಿಮಾರು ಗ್ರಾಮ ನಿವಾಸಿ ಆನಂದ ಸಪಲ್ಯ(55) ಬಂಧಿತ ಆರೋಪಿ. ಆನಂದ ಸಪಲ್ಯ ಶನಿವಾರ ಸಂಜೆ ವೇಳೆ ಮದ್ಯಸೇವಿಸಿ ಬೋಳಾರದಲ್ಲಿರುವ ಸಲೂನ್ ಗೆ ಬಂದಿದ್ದಾನೆ. ಈ ವೇಳೆ ಆತ ಸಲೂನ್ ಮಾಲಕನ ಎಡ್ವಿನ್ ವಿನಯ್ ಕುಮಾರ್ ಎದೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಚೂರಿ ಇರಿತದ ಪರಿಣಾಮ ಗಾಯಗೊಂಡ ಎಡ್ವಿನ್ ವಿನಯ್ ಕುಮಾರ್ ಅವರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪರಾರಿಯಾಗಿದ್ದ ಆನಂದ ಸಪಲ್ಯನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.