Visitors have accessed this post 310 times.
ಉಡುಪಿ: ಆನ್‌ಲೈನ್ ಮೂಲಕ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ. ವೀಣಾ ಎಂಬವರ ವಾಟ್ಸಾಪ್ ಸಂಖ್ಯೆಗೆ “ನೀವು ಒಂದು ಗೂಗಲ್ ರಿವ್ಯೂ ಮಾಡಿದರೆ 50 ರೂ. ನೀಡಲಾಗುವುದು ಎಂಬ ಸಂದೇಶ ಬಂದಿತ್ತು. ಅದನ್ನು ನಂಬಿದ ಅವರು ಗೂಗಲ್ ರಿವ್ಯೂ ಮಾಡಿದ್ದು, ಮೊದಲು 150 ರೂ. ಪಡೆದಿದ್ದರು.ಅನಂತರ ಆರೋಪಿಯು ವೀಣಾರಿಗೆ ವಿವಿಧ ಟಾಸ್ಕ್ ಗಳನ್ನು ನೀಡಿ ನಂಬಿಸಿ ಒಟ್ಟು 2,21,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ