ಮಂಗಳೂರು: ಹಜ್‌ ಯಾತ್ರೆಗೆ ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

ಮಂಗಳೂರು: ಭಾರತೀಯ ಹಜ್‌ ಕಮಿಟಿ ಮೂಲಕ ಹಜ್‌ ಯಾತ್ರೆಗೆ ಹೊರಟವರು ಈಗಾಗಲೇ ಎರಡು ಕಂತುಗಳ ಹಣ ಪಾವತಿಸಿದ್ದಾರೆ. ಕೊನೆಯ ಕಂತಿನ ಮೊತ್ತವನ್ನು ಎ. 27ರೊಳಗೆ ಪಾವತಿಸುವಂತೆ ರಾಜ್ಯ ಹಜ್‌ ಸಮಿತಿ ಸದಸ್ಯ ಸಯ್ಯಿದ್‌ ಅಶ್ರಫ್‌ ಅಸ್ಸಖಾಫ್‌ ತಂಙಳ್‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬೆಂಗಳೂರು ವಿಮಾನ ನಿಲ್ದಾಣದಿಂದ ಹಜ್‌ಗೆ ತೆರಳುವವರಿಗೆ 3,43,500 ರೂ.

ನಿಗದಿಯಾಗಿದ್ದು, ಈ ಪೈಕಿ ಈಗಾಗಲೇ 2,51,800 ರೂ. ಪಾವತಿಯಾಗಿದೆ. ಬಾಕಿ ಮೊತ್ತ 91,700 ರೂ.ಗಳನ್ನು ಎ. 27ರೊಳಗಾಗಿ ಪಾವತಿಸಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರಿಗೆ ಎಂದಿನಂತೆ ಮಂಗಳೂರು ಯೇನಪೊಯ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಿದ್ದು, ದಿನಾಂಕವನ್ನು ಶೀಘ್ರ ತಿಳಿಸಲಾಗುವುದು ಎಂದರು.

Leave a Reply