August 30, 2025
WhatsApp Image 2024-04-18 at 1.56.27 PM

ಮಂಗಳೂರು: ದುಬೈ ಹಾಗೂ ನೆರೆಯ ಮಧ್ಯಪ್ರಾಚ್ಯ ದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಂಗಳೂರು ಮತ್ತು ದುಬೈ ಮಾರ್ಗದಲ್ಲಿ ಸಂಚರಿಸಬೇಕಿದ್ದ ನಾಲ್ಕು ವಿಮಾನಗಳನ್ನು ಬುಧವಾರ ರದ್ದುಗೊಳಿಸಲಾಗಿದೆ.

ತಿರುಚಿರಾಪಳ್ಳಿಯಿಂದ ಮಂಗಳೂರು ಮಾರ್ಗದ ಮತ್ತೊಂದು ವಿಮಾನವನ್ನು ಸಹ ರದ್ದುಗೊಳಿಸಲಾಗಿದೆ. ಇಲ್ಲಿಂದ ಜೆಡ್ಡಾಕ್ಕೆ ತೆರಳುವ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ಫ್ಲೈಟ್ ನಂಬರ್​ 814, ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್​ 813, ದುಬೈನಿಂದ ಮಂಗಳೂರಿಗೆ ತೆರಳಬೇಕಿದ್ದ ವಿಮಾನ 384 ಮತ್ತು ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಫ್ಲೈಟ್ ನಂಬರ್​ 383 ಅನ್ನು ರದ್ದುಗೊಳಿಸಲಾಗಿದೆ.

ಅದೇ ರೀತಿ ಮಂಗಳೂರಿನಿಂದ ಜೆಡ್ಡಾಗೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ವಿಳಂಬವಾಗಿದೆ. ಮತ್ತೊಂದೆಡೆ, ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ಗುರುವಾರ ರದ್ದುಗೊಳಿಸಲಾಗಿದೆ.

ಜೆಡ್ಡಾದಿಂದ ಮಂಗಳೂರಿಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಖ್ಯೆ 796 ಮತ್ತು ಮಂಗಳೂರಿನಿಂದ ತಿರುಚಿರಾಪಳ್ಳಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೂಡಾ ವಿಳಂಬವಾಗಲಿದೆ. ಎಪ್ರಿಲ್ 15 ರ ಮಧ್ಯರಾತ್ರಿಯಿಂದ, ದುಬೈನಲ್ಲಿ ಮಳೆ ಬಂದು ಭಾರೀ ನೀರು ನಿಂತಿದ್ದು ವಿಮಾನ ಪ್ರಯಾಣಕ್ಕೆ ಅಡ್ಡಿಪಡಿಸಿದೆ.

About The Author

Leave a Reply