Visitors have accessed this post 622 times.

ಬಂಟ್ವಾಳ: ಸಾಲೆತ್ತೂರು ಜಂಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್.ಆರ್.ಪೂಜಾರಿ ಬಿರುಸಿನ ಮತಯಾಚನೆ; ಕಾಂಗ್ರೆಸ್ ಗೆಲುವು ಶತಸಿದ್ದ

Visitors have accessed this post 622 times.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಕೊಳ್ನಾಡು ಗ್ರಾಮದ ಸಾಲೆತ್ತೂರು ಜಂಕ್ಷನ್ ‌ನಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಪದ್ಮರಾಜ್ ಆರ್ ಪೂಜಾರಿ ಮಾತಾಡಿ ನಮಗೆ ಗೆಲುವು ಶತಸಿದ್ದ,ಮಂಗಳೂರಿನಲ್ಲಿ ಎಲ್ಲಾ ಸಂಪನ್ಮೂಲಗಳು ಇದೆ ಇದನ್ನು ಸದುಪಯೋಗಿಸಿಕೊಂಡು ಮುಂದಿನ ದಿನಗಳಲ್ಲಿ ಮಂಗಳೂರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೆಯ್ಯುತ್ತೇನೆ.ನಮ್ಮ ಕಾರ್ಯಕರ್ತರು ಇನ್ನುಳಿದ ದಿನಗಳಲ್ಲಿ ದಿನದ ಮುಕ್ಕಾಲು ಬಾಗ ಪಕ್ಷದ ಗೆಲುವಿಗಾಗಿ ಶ್ರಮ ವಹಿಸಿರಿ ಎಂದು ಕರೆಯಿತ್ತರು,ಅಲ್ಲದೆ ನನ್ನ ಬಗ್ಗೆ ಬಿಜೆಪಿಗರು ಸೋಲಿನ ಬೀತಿಯಲ್ಲಿ ಇಲ್ಲಸಲ್ಲದ ಆರೋಪ ನಡೆಸುತ್ತಿದ್ದು ಅದಕ್ಕೆಲ್ಲ ಸೂಕ್ತ ಸಂದರ್ಭದಲ್ಲಿ ಉತ್ತರ ನೀಡಲಿದ್ದೇನೆ.ಮತ್ತು ಜಾತಿಯ ಬಗ್ಗೆ ಪ್ರಸ್ತಾಪಿಸಿ, ನನ್ನ ಬಳಿ ದಾಖಲೆಗಳಿವೆ ಇದೆಲ್ಲ ಗೊಂದಲ ಸೃಷ್ಟಿಸುವ ಹೊರತು ಇನ್ನೇನಿಲ್ಲ ಎಂದು ತಿಳಿಸಿದರಲ್ಲದೆ, ನನ್ನ ಗೆಲುವಿನ ಮೂಲಕ ಕ್ಷೇತ್ರದ ಜನರಿಗೆ ಅಭಿವೃದ್ಧಿಯ ನ್ಯಾಯ ಒದಗಿಸುತ್ತೇನೆ ಎಂದರು.

ಸಭೆಯನ್ನು ಉದ್ದೇಶಿಸಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಗಳೂ,ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತಾಡಿ ಕೇಂದ್ರ ಸರಕಾರದ ದಬ್ಬಾಳಿಕೆ,ಬೆಲೆಯೇರಿಕೆ,ವಿವಿಧ ರಾಜ್ಯದ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸುವ ಸಂವಿಧಾನ ವಿರೋದಿ ಚಟುವಟಿಕೆಗಳ ಮಾತಾಡಿ,ಬಿಜೆಯ ಆಡಳಿತ ಈಗೇಯೇ ಮುಂದುವರಿದರೆ ಮುಂದೊಂದು ದಿನ ಪ್ರಜಾಪ್ರಭುತ್ವ, ಚುಣಾವಣೆಯೇ ಇಲ್ಲದಂತಾಗುತ್ತದೆ ಎಂದರು.ಕೆ.ಪಿ.ಸಿ.ಸಿ‌‌ ನೂತನ ಪ್ರದಾನ ಕಾರ್ಯದರ್ಶಿಗಳೂ ಕೊಳ್ನಾಡು ಜಿ.ಪಂಚಾಯತ್ ಕ್ಷೇತದ ಜಿ.ಪಂಚಾಯತ್ ಮಾಜಿ ಸದಸ್ಯರಾದ ಎಂ‌.ಎಸ್.ಮಹಮ್ಮದ್ ಮಾತಾಡಿ ಕೊಳ್ನಾಡು ಜಿ.ಪಂಚಾಯತ್ ಕ್ಷೇತ್ರ ಕಾಂಗ್ರೆಸ್ ಗೆ ಪ್ರತಿ ಚುಣಾವಣೆಯಲ್ಲೂ ಅತೀ ಹೆಚ್ಚು ಮುನ್ನಡೆ ನೀಡಿದ ಕ್ಷೇತ್ರವಾಗಿದ್ದು, ಪದ್ಮರಾಜ್ ಪೂಜಾರಿ ಗೆಲುವಿನ ಮೂಲಕ ಇತಿಹಾಸದೊಂದಿಗೆ ಸೌಹಾರ್ದತೆಯು ಮರುಕಳಿಸಲಿದೆ ಎಂದರು.ಮಂಗಳೂರು ಲೋಕಸಭಾ ಚುನಾವಣಾ ಪ್ರಚಾರ ಸಮಿತಿ ಅದ್ಯಕ್ಷರೂ,ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ ಮಾತಾಡಿ ನಮ್ಮ ಸಂಸದರಾಗಿದ್ದ ಶ್ರೀನಿವಾಸ ಮಲ್ಯರು ಹಾಗೂ ಇನ್ನಿತರ ನಮ್ಮ ಪಕ್ಷದ ಸಂಸದರು ಇಲ್ಲಿಗೆ ವಿಮಾನ ನಿಲ್ದಾನ,NITK,ಬಂದರು,ರಾಷ್ಟ್ರೀಯ ಹೆದ್ದಾರಿ ಇತ್ಯಾದಿಗಳ ಕೊಡುಗೆ ಅಪಾರ. ಜನಾರ್ದನ ಪೂಜಾರಿಯಂತಹ ನಾಯಕರನ್ನು ಕಂಡಂತಹ ನಮ್ಮ ಜಿಲ್ಲೆಗೆ 33 ವರ್ಷಗಳಿಂದ ನಮ್ಮ ಪಕ್ಷದ ಸಂಸದರಿಲ್ಲದೆ ಯಾವದೇ ರೀತಿಯ ಅಭಿವೃದ್ದಿ ಈ ಬಾಗದಲ್ಲಿ ಕಂಡಿಲ್ಲ.ಒಬ್ಬ ಸರಳ ಸಜ್ಜನಿಕೆಯ ಬಿಲ್ಲವ ಸಮಾಜದ ಸಮರ್ಥ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಅವಿರತ ಶ್ರಮ ವಹಿಸಬೇಕೆಂದರು..

 

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್,ಬಂಟ್ವಾಳ ಚುನಾವಣಾ ಉಸ್ತುವಾರಿಗಳಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ತಾಲೂಕು ಪಂಚಾಯತ್ ಮಾಜಿ ಉಪಾದ್ಯಕ್ಷರಾದ ಅಬ್ಬಾಸ್ ಅಲಿ,ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅದ್ಯಕ್ಷರಾದ ಹೈಡಾ ಸುರೇಶ್,ಪಾಣೆಮಂಗಳೂರು ಚುಣಾವಣಾ ಪ್ರಚಾರ ಸಮಿತಿ ಅದ್ಯಕ್ಷರಾದ ಅನ್ವರ್ ಕರೋಪಾಡಿ,ಪಾಣೆಮಂಗಳೂರು ಮಹಿಳಾ ಕಾಂಗ್ರೇಸ್ ಅದ್ಯಕ್ಷರಾದ ಜಯಂತಿ ಪೂಜಾರಿಕೊಳ್ನಾಡು ಗ್ರಾ.ಪಂಚಾಯತ್ ಅದ್ಯಕ್ಷರಾದ ಅಶ್ರಪ್.ಕೆ‌‌.ಸಾಲೆತ್ತೂರು,ಕೊಳ್ನಾಡು ಸಾಲೆತ್ತೂರು ವಲಯ ಕಾಂಗ್ರೆಸ್ ಅದ್ಯಕ್ಷರು,ಗ್ರಾ.ಪಂಚಾಯತ್ ಸದಸ್ಯರು,ಪಕ್ಷದ ಮುಂಚೂಣಿ ಘಟಕದ ಅದ್ಯಕ್ಷರು,ಕಾರ್ಯಕರ್ತರು ಉಪಸ್ಥಿತಿತರಿದ್ದರು..

Leave a Reply

Your email address will not be published. Required fields are marked *