ಬೈಕಿಗೆ ಟಿಪ್ಪರ್ ಡಿಕ್ಕಿ- ಯಕ್ಷಗಾನ ಕಲಾವಿದ ಮೃತ್ಯು..!

ಉಡುಪಿ  : ಟಿಪ್ಪರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯಕ್ಷಗಾನ ಕಲಾವಿದರೊಬ್ಬರು ಮೃತಪಟ್ಟ ಘಟನೆ  ಶುಕ್ರವಾರ ಉಡುಪಿ  ಅಂಬಾಗಿಲು ಜಂಕ್ಷನ್ ಬಳಿ ನಡೆದಿದೆ.

ಬ್ರಹ್ಮಾವರ ಮಟಪಾಡಿಯ ಪ್ರಭಾಕರ ಆಚಾರ್ಯ(62) ಮೃತ ದುರ್ದೈವಿಯಾಗಿದ್ದಾರೆ . ಅಪಘತಾದಲ್ಲಿ ಗಂಭೀರ ವಾಗಿ ಗಾಯಗೊಂಡಿರುವ ಸಹ ಸವಾರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯ ರಸ್ತೆ ಕಡೆ ಬರುತ್ತಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಲಾರಿಯ ಚಕ್ರದಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪ್ರಭಾಕರ ಆಚಾರ್ಯ ಸ್ಥಳದಲ್ಲಿಯೇ ಮೃತ ಪಟ್ಟರೆಂದು ತಿಳಿದುಬಂದಿದೆ. ಮಟಪಾಡಿ ಪ್ರಭಾಕರ ಆಚಾರ್ಯ ಮಟಪಾಡಿ ಶ್ರೀ ನಂದಿಕೇಶ್ವರ ಯಕ್ಷಗಾನ ಮಂಡಳಿ ಅಧ್ಯಕ್ಷರಾಗಿದ್ದು, ಪ್ರಭುದ್ಧ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply