
ಪ್ರೀತಿ ಮಾಡಿದ ಯುವತಿಯ ಮದುವೆ ದಿನದಂದೆ ಪ್ರಿಯತಮನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.ಪ್ರೇಯಸಿಯ ಮದುವೆಯ ದಿನದಂದೇ ಪ್ರಿಯತಮ ವೆಂಕಟೇಶ್ ಕುಮಾರ್(22) ಶವವಾಗಿದ್ದಾನೆ. ನೌಬಾದ್ ಹೈವೇ ಬ್ರಿಡ್ಜ್ ಬಳಿಯ ರೈಲ್ವೆ ಹಳಿ ಮೇಲೆ ವೆಂಕಟೇಶ ಕುಮಾರ್ ತುಂಡರಿಸಿದ್ದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತದೇಹ ಇದ್ದ ಸ್ಥಳದಿಂದ 1ಕಿ.ಮೀ ದೂರದಲ್ಲಿ ಯುವಕನ ಬೈಕ್ ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.



ಬೀದರ್ ತಾಲೂಕಿನ ನಿಜಾಂಪೂರ್ ಗ್ರಾಮದ ವೆಂಕಟೇಶ ಕುಮಾರ್ ಖಾಸಗಿ ಕಂಪೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅದೇ ಗ್ರಾಮದಲ್ಲಿರುವ ಹುಡುಗಿಯನ್ನು ಕಳೆದ ಮೂರು ವರ್ಷಗಳಿಂದ ಈತ ಪ್ರೀತಿಸುತ್ತಿದ್ದ. ಹುಡುಗಿಯ ಮದುವೆ ದಿನದಂದೇ ಯುವಕ ದೇಹ ತುಂಡರಿಸಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಕುಟುಂಬಸ್ಥರ ಆಂಕ್ರಂದನ ಮುಗಿಲುಮುಟ್ಟಿದೆ. ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ನ್ಯೂಟೌನ್ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.