Visitors have accessed this post 365 times.

BREAKING NEWS: ಬಾವಿಯಲ್ಲಿ ರಿಂಗ್ ಅಳವಡಿಸುವಾಗ ಉಸಿರುಗಟ್ಟಿ ಇಬ್ಬರು ದುರ್ಮರಣ

Visitors have accessed this post 365 times.

ಕೇಪು : ಬಾವಿಯೊಳಗೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಪಡಿಬಾಗಿಲುನಲ್ಲಿ ನಡೆದಿದೆ.

ಇಬ್ರಾಹಿಂ (40), ಮಲಾರ್ ನಿವಾಸಿ ಅಲಿ (24) ಮೃತ ದುರ್ದೈವಿಗಳು. 30 ಅಡಿ ಆಳದ ಬಾವಿಗೆ ರಿಂಗ್ ಹಾಕಲು ಇಳಿದಿದ್ದ ವೇಳೆ ಈ ದುರಂತ ಸಂಭವಿಸಿದೆ.

 

ಬಾವಿಯೊಳಗೆ ಆಕ್ಸಿಜನ್ ಇಲ್ಲದೇ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *