ಪೊಲಿಪು ಮಸೀದಿ ಜಂಕ್ಷನ್ ಬಳಿ ಕಾರು ಪಲ್ಟಿ..!

ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಪೊಲಿಪು ಮಸೀದಿ ಜಂಕ್ಷನ್ ಬಳಿ ಕುಂದಾಪುರದಿಂದ ಮೂಲ್ಕಿ ಕಡೆಗೆ ತೆರಳುತ್ತಿದ್ದ ಟೊಯೊಟಾ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಡಿವೈಡರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ನಿಂತಿದೆ.
ಕಾರಿನಲ್ಲಿದ್ದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply