Visitors have accessed this post 1121 times.
ಬೆಂಗಳೂರು: ದೇಶದ ತೈಲ ಕಂಪನಿಗಳು ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿವೆ. 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 19 ರೂಪಾಯಿ ಇಳಿಸಿವೆ. ಈ ಮೂಲಕ ಕಮರ್ಷಿಯಲ್ ಸಿಲಿಂಡರ್ ಗ್ರಾಹಕರಿಗೆ ಕೊಂಚ ರಿಲಿಫ್ ಸಿಕ್ಕಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,745.5 ರೂಪಾಯಿಗೆ ಇಳಿಕೆ ಆಗಿದೆ. ಪ್ರತಿ ತಿಂಗಳ ಮೊದಲ ದಿನವೇ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಪರಿಷ್ಕರಣೆ ಮಾಡುತ್ತವೆ. ಅಂತೆಯೇ ಈ ಮೇ ಮೊದಲ ದಿನ ಗ್ರಾಹಕರಿಗೆ ತೈಲ ಕಂಪನಿಗಳು ಗುಡ್ನ್ಯೂಸ್ ನೀಡಿವೆ.
ಮುಂಬೈನಲ್ಲಿ 1698.50 ರೂಪಾಯಿ ಆಗಿದ್ದರೆ, ಕೋಲ್ಕತ್ತದಲ್ಲಿ 1859 ರೂಪಾಯಿ ಹಾಗೂ ಚೆನ್ನೈನಲ್ಲಿ 1911 ರೂಪಾಯಿ ಆಗಿದೆ. ಇನ್ನು ಗೃಹ ಬಳಕೆಯ ಸಿಲಿಂಡರ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಏಪ್ರಿಲ್ ತಿಂಗಳಿನಲ್ಲೂ ಇಳಿಕೆ ಮಾಡಲಾಗಿತ್ತು. ಹಿಂದಿನ ತಿಂಗಳ 30.50 ರೂಪಾಯಿ ಇಳಿಕೆಯಾಗಿತ್ತು.