
ಮಣಿಪಾಲ: ಬ್ಯಾಂಕಿನವರ ಹೆಸರಿನಲ್ಲಿ ಕರೆ ಮಾಡಿ ಕ್ರೆಡಿಟ್ ಕಾರ್ಡ್‌ನಿಂದ ಸಾವಿರಾರು ರೂ. ಹಣ ಜಮೆ ಮಾಡುವ ಮೂಲಕ ವಂಚಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ಶಶಿಧರ(46) ಎಂಬವರಿಗೆ ಮೇ 1ರಂದು ಬ್ಯಾಂಕಿನವರು ಎಂದು ಹೇಳಿ ಅಪರಿಚಿತ ಯುವತಿ ಕರೆ ಮಾಡಿದ್ದು, ನಿಮ್ಮ ಕ್ರೆಡಿಟ್ ಲಿಮಿಟ್ ಹೆಚ್ಚಿಸುವುದಾಗಿ ನಂಬಿಸಿ ಮೋಸದಿಂದ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಸಿವಿವಿ ನಂಬರ್ ಪಡೆದುಕೊಂಡಿದ್ದಳು. ಬಳಿಕ ಓಟಿಪಿಯನ್ನು ಪಡೆದುಕೊಂಡು ಕ್ರೆಡಿಟ್ ಕಾರ್ಡ್‌ನಿಂದ 74,216ರೂ. ಹಣವನ್ನು ಜಮೆ ಮಾಡಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.


