October 27, 2025
WhatsApp Image 2024-05-04 at 11.38.55 AM

ಔತಣಕೂಟವೊಂದರಲ್ಲಿ ಯುವಕನೋರ್ವ ಯುವತಿಯೊಂದಿಗಿರುವುದನ್ನು ವ್ಯಕ್ತಿಯೊರ್ವ  ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ  ಎಂದು ಆರೋಪಿಸಿ  ತಂಡವೊಂದು  ಫೋಟೊ ತೆಗೆದ ವ್ಯಕ್ತಿಯ  ಮನೆಗೆ ಬಂದು ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ರೆಂಜಲಾಡಿ ಎಂಬಲ್ಲಿ ಇತ್ತೀಚೆಗೆ ನಡೆದಿದೆ.

ರೆಂಜಲಾಡಿಯ ಯುವತಿಯ ವಿವಾಹದ ಔತಣಕೂಟ ಏ.29ರಂದು ನಡೆದಿತ್ತು. ಯುವತಿಯೊಂದಿಗೆ ನಿಶಾಂತ್‌ ಎಂಬ ಯುವಕ ಇರುವ  ಫೋಟೋವನ್ನು ಬಾಂತಾಜೆ ನಿವಾಸಿ ದಿವಾಕರ ಎಂಬವರು ತೆಗೆದಿದ್ದಾರೆ ಎನ್ನುವುದು ಹಲ್ಲೆ ಮಾಡಿದವರ ತಕರಾರು.

ಈ ವಿಚಾರವಾಗಿ ಮಾತನಾಡಲು  ಅದೇ ದಿನ ರಾತ್ರಿ 11.30ರ ಸುಮಾರಿಗೆ ನಿಶಾಂತ್ ತನ್ನ ಸಹಚರರಾದ ಜನಾರ್ದನ, ಲೋಕೇಶ, ರಮೇಶ್, ಉದಯ, ಭುವನ, ಅಶ್ವಿತ್ ಎಂಬವರೊಂದಿಗೆ  ದಿವಾಕರ   ಮನೆಗೆ ಬಂದಿದ್ದಾರೆ. ಈ ವೇಳೆ   ದಿವಾಕರ್‌ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೇಳಿ ಬಂದಿದೆ.

ದಿವಾಕರ ಅವರ ಅತ್ತಿಗೆ ಭವ್ಯಶ್ರೀ ಅವರು ಜಗಳ ಬಿಡಿಸಲು ಯತ್ನಿಸಿದಾಗ ಸ್ವಾತಿ ಮತ್ತು ರೇಷ್ಮಾ, ಶೈನಿ ಎಂಬವರು ಭವ್ಯ ಶ್ರೀಯವರಿಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ನೆರೆಮನೆಯ ಶಿವಪ್ಪ ಎಂಬವರು ರಕ್ಷಣೆಗೆ ಬಂದಾಗ ಅವರಿಗೂ ನಿಶಾಂತ್ ಹಾಗೂ ತಂಡ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನೆರೆಮನೆಯ ಬಾಬು ಗೌಡ ಮತ್ತು ಪ್ರದೀಪ್ ಅವರುಗಳು ಗಾಯಾಳುಗಳನ್ನು ಉಪಚರಿಸಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply