August 30, 2025
WhatsApp Image 2024-05-05 at 3.38.26 PM

ಕಾಸರಗೋಡು : ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿಆಸ್ಪತ್ರೆಗೆ ದಾಖಲಿಸಲಾಗಿದ್ದ ಎ ಎಸ್ ಐ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಂಜೆ ಮೃತಪಟ್ಟಿದ್ದಾರೆ.

ಬೇಡಡ್ಕ ಠಾಣಾ ಎ ಎಸ್ ಐ ರಾಜಾಪುರ ಕೋಲಚ್ಚಿಲ್ ನ ವಿಜಯನ್ (50) ಮೃತಪಟ್ಟವರು. ಎರ್ನಾಕುಲಂ ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನ್ ಶನಿವಾರ ಸಂಜೆ ಮೃತ ಪಟ್ಟರು. ಏಪ್ರಿಲ್ ೨೯ ರಂದು ಮಧ್ಯಾಹ್ನ ಬೇಡಡ್ಕ ಪೊಲೀಸ್ ಠಾಣೆ ಯ ಸಮೀಪದ ವಸತಿ ಗ್ರಹದಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಜಯನ್ ರವರನ್ನು ಕಾಸರಗೋಡು ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರ ವಾದುದರಿಂದ ಬುಧವಾರ ಎರ್ನಾಕುಲಂ ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ರಾಜಕೀಯ ಒತ್ತಡವು ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಯುವ ಕಾಂಗ್ರೆಸ್ ಕಾರ್ಯಕರ್ತರೋರ್ವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲು ವಿಜಯನ್ ರವರ ಮೇಲೆ ಒತ್ತಡ ಕೆಲ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ಕೆಲ ಮುಖಂಡರು ಒತ್ತಡ ಹೇರಿದ್ದರು . ಇದರಿಂದ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿಬರುತ್ತಿದೆ

About The Author

Leave a Reply