August 30, 2025
WhatsApp Image 2024-05-07 at 8.55.13 AM

ಚೆನ್ನೈ : ಕಾಲೇಜಿನ ಸಹಪಾಠಿಯ ಮದುವೆಗೆ ಬಂದಿದ್ದ ಎಂಬಿಬಿಎಸ್ ವಿಧ್ಯಾರ್ಥಿಗಳು ಕನ್ಯಾಕುಮಾರಿಯಲ್ಲಿ ಸಮುದ್ರಕ್ಕೆ ಇಳಿದು ಅದರಲ್ಲಿ ಐವರು ಸಾವನಪ್ಪಿದ ಘಟನೆ ನಡೆದಿದೆ.

ಮೃತರನ್ನು ತಿರುಚನಾಪಳ್ಳಿಯ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ತಂಚವೂರ್ ಸ್ವೇದೇಶಿ ಡಿ. ಚಾರುಕವಿ (23), ನೆಯ್‌ವೇಲಿ ನಿವಾಸಿ ಬಿ. ಗಾಯತ್ರಿ (25), ಕನ್ಯಾಕುಮಾರಿ ಸ್ಥಳೀಯ ಪಿ. ಸರ್ವದರ್ಶಿತ್ (23), ಡಿಂಡಿಗಲ್ ಸ್ಥಳೀಯ ಎಂ. ಪ್ರವೀಣ್ ಸಾಂ (23), ಆಂಧ್ರಪ್ರದೇಶದಲ್ಲಿರುವ ವೆಂಕಟೇಶ್ (24) ಮೃತಪಟ್ಟವರು.  ಕಾಲೇಜಿನ ಒಂದು ತಂಡ ತಮ್ಮ ಸಹಪಾಠಿಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಕನ್ಯಾಕುಮಾರಿಗೆ ಆಗಮಿಸಿದ್ದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಕನ್ಯಾಕುಮಾರಿ ಬೀಚ್ ಬಳಿ ಮುಚ್ಚಲ್ಪಟ್ಟಿರುವ ಲೇಮೂರ್ ಬೀಚ್‌ಗೆ ತೆಂಗಿನತೋಟವೊಂದರ ಮೂಲಕ ಸೋಮವಾರ ಮುಂಜಾನೆ ಪ್ರವೇಶ ಮಾಡಿದ್ದರು. ಇಲ್ಲಿ ನೀರಿನ ಮಟ್ಟ ಜಾಸ್ತಿ ಇತ್ತು. ಈಜು ಬಾರದೇ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಐವರೂ ಮೃತಪಟ್ಟಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ ಎಂದು ಕನ್ಯಾಕುಮಾರಿ ಎಸ್‌.ಪಿ ಈ. ಸುಂದರವದನಂ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದ ಮೃತರು ಇನ್ನೇನು ಪದವಿ ಮುಗಿಸಿ ಕಾಲೇಜಿನಿಂದ ಹೊರಡುವವರಿದ್ದರು.

About The Author

Leave a Reply