ಮಂಗಳೂರು : ರಸ್ತೆಯಲ್ಲಿ ಸಿಡ್ಡಾಗಿ ಬಿದ್ದ ಸ್ಕೂಟರ್ ಮೇಲೆ ಟಿಪ್ಪರ್ ಹರಿದ ಪರಿಣಾಮ ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಪಡೀಲ್ ಸಮೀಪದ ನಾಗುರಿ-ಅಳಪೆ ಬಳಿ ಗುರುವಾರ ಸಂಜೆ ನಡೆದಿದೆ.
ಮೃತಪಟ್ಟ ಯುವಕನನ್ನು ಎಕ್ಕೂರಿನ ನಿವಾಸಿ ಹರ್ಷನ್ ಎಂದು ಗುರುತಿಸಲಾಗಿದೆ. ಕೀರ್ತನ್ ಮತ್ತು ಕಿಶೋರ್ ಎಂಬವರು ಗಾಯಗೊಂಡವರಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಡೀಲ್ನಿಂದ ಪಂಪ್ವೆಲ್ಗೆ ಚಲಿಸುತ್ತಿದ್ದ ಸ್ಕೂಟರ್ ನಾಗುರಿ-ಅಳಪೆಯ ಮಧ್ಯೆ ಸ್ತಿಡ್ಡಾಗಿ ಹೆದ್ದಾರಿಗೆ ಮಗುಚಿ ಬಿತ್ತು. ಇದರಿಂದ ಸ್ಕೂಟರ್ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟರು. ಅದೇ ‘ ರಸ್ತೆಯಲ್ಲಿ ವೇಗದಲ್ಲಿ ಚಲಿಸುತ್ತಿದ್ದ ಟಿಪ್ಪರ್ ಹರ್ಷನ್ ಮೇಲೆಯೇ ಹರಿದಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.