ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಹತ್ಯೆ ಮಾಡಿ ಆಕೆಯ ತಲೆ ಕೊಂಡೊಯ್ದಿದ್ದ ಆರೋಪಿಯ ನೇಣಿಗೆ ಶರಣಾಗಿದ್ದಾನೆ. ಮೃತನನ್ನು 35 ವರ್ಷದ ಪ್ರಕಾಶ್ ಓಂಕಾರಪ್ಪ ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಓಂಕಾರಪ್ಪ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಅಪ್ರಾಪ್ತ ಬಾಲಕಿ ಮೀನಾ ಜೊತೆ ನಿಶ್ಚಿತಾರ್ಥವಾಗಲು ಹೋಗಿ ಕೊನೆಗೆ ಅಧಿಕಾರಿಗಳ ಮಧ್ಯಪ್ರವೇಶದಿಂದ ನಿಶ್ಚಿತಾರ್ಥ ಕ್ಯಾನ್ಸಲ್ ಆಗಿತ್ತು. ಇದೇ ಸಿಟ್ಟಲ್ಲಿ ಓಂಕಾರಪ್ಪ ವಿಧ್ಯಾರ್ಥಿನಿಯ ಮನೆಗೆ ತೆರಳಿ ಆರೋಪಿ ಆಕೆಯ ಮನೆಗೆ ಬಂದು ಪೋಷಕರ ಎದುರೇ ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಚ್ಚಿನಿಂದ ತಲೆ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದು ಪರಾರಿಯಾಗಿದ್ದನು.
ವಿದ್ಯಾರ್ಥಿನಿ ಮೀನಾ ಹತ್ಯೆ ಮಾಡಿದ ನಂತರ ಆಕೆಯ ತಲೆಯನ್ನು ಪ್ರಕಾಶ್ ಕೊಂಡೊಯ್ದಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪತ್ತೆಯಾಗಿ ಶೋಧಕಾರ್ಯ ಆರಂಭಿಸಿತ್ತು. ಸುದೀರ್ಘ 18 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ಸೂರ್ಲಬ್ಬಿ ಗ್ರಾಮದಿಂದ 3 ಕಿ.ಮೀ. ದೂರದ ಹಮ್ನಿಯಾಲದಲ್ಲಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಮೃತದೇಹ ಪತ್ತೆಯಾಗಿದೆ. ಆದರೆ ವಿದ್ಯಾರ್ಥಿನಿಯ ರುಂಡ ಇನ್ನು ಪತ್ತೆಯಾಗಿಲ್ಲ.