
ಕಡಬ: ಸಿಡಿಲು ಬಡಿದು ಒರ್ವ ಕಾರ್ಮಿಕ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಎಂಬಲ್ಲಿ ನಡೆದಿದೆ. ನದಿ ಬದಿಯ ಶೆಡ್ ನಲ್ಲಿದ್ದ ವೇಳೆ ಶೆಡ್‌ಗೆ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ. ಗುಂಡ್ಯ ನದಿಯಲ್ಲಿ ಮರಳು ತೆಗೆಯುವ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮಳೆ ಬರುವ ಕಾರಣ ಶೆಡ್ಡ್‌ನಲ್ಲಿ ಕುಳಿತ್ತಿದ್ದರು. ಉತ್ತರ ಪ್ರದೇಶ ಮೂಲದ ಚೈನ್‌ಪುರ್ ಗುಲೌರಾ ನಿವಾಸಿಯಾಗಿರುವ 56 ವರ್ಷದ ಶ್ರೀಕಿಶುನ್ ಮೃತ ವ್ಯಕ್ತಿ. ಈತನ ಜೊತೆಗಿದ್ದ ಇಬ್ಬರಿಗೂ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ರವಾನೆ ಮಾಡಲಾಗಿದೆ.


