February 15, 2026
WhatsApp Image 2024-05-13 at 10.05.50 AM

ಮಂಗಳೂರು: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಮ್ರಾ ಯಾತ್ರೆ ಕೈಗೊಂಡಿದ್ದ 35 ಮಂದಿಯ ತಂಡದ ಮುಖ್ಯಸ್ಥನ ಬ್ಯಾಗ್‌ನಿಂದ 26,342 ಸೌದಿ ರಿಯಾಲ್ (ಅಂದಾಜು 5.88 ಲಕ್ಷ ರೂ.) ಕಳ್ಳತನವಾಗಿರುವ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಹ್ಮದ್ ಇಕ್ಬಾಲ್ ಮತ್ತು ಇತರ 35 ಸದಸ್ಯರು ಮೇ 1 ರಂದು ಜಿದ್ದಾಕ್ಕೆ ತೆರಳಿದ್ದರು. ಜಿದ್ದಾ ತಲುಪಿದಾಗ ಪತಿಯ ಬ್ಯಾಗ್‌ನಲ್ಲಿದ್ದ ಸೌದಿ ರಿಯಾಲ್ ಕಳವಾಗಿರುವ ವಿಚಾರ ಬೆಳಕಿಗೆ ಬಂತು ಎಂದು ತಂಡದ ಮುಖ್ಯಸ್ಥ ಅಹ್ಮದ್ ಇಕ್ಬಾಲ್ ಅವರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಜೊತೆಗೆ ಒಂದು ಸುತ್ತಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

About The Author

Leave a Reply