February 27, 2026
WhatsApp Image 2024-05-14 at 12.08.09 PM

ಬೆಂಗಳೂರಿನ ಖಾಸಗಿ ಶಾಲೆಗೆ ತಡರಾತ್ರಿ ಬಾಂಬ್ ಬೆದರಿಕೆ ಇ-ಮೇಲ್ ಬೆದರಿಕೆ ಬಂದಿದ್ದು, ಶಾಲೆಯನ್ನು ಸ್ಪೋಟಿಸುವುದಾಗಿ ಮೇಲ್ ನಲ್ಲಿ ತಿಳಿಸಲಾಗಿದೆ.

ಬೆಂಗಳೂರಿನ ಜೈನ್ ಹರಿಟೇಜ್ ಶಾಲೆಗೆ ದುಷ್ಕರ್ಮಿಗಳು ಮಧ್ಯರಾತ್ರಿ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದಾರೆ.

ಹೀಗಾಗಿ ಶಾಲೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಇದೆ.

ರಾತ್ರಿ ಸುಮಾರು 12.20ರ ಸುಮಾರಿಗೆ ಬಾಂಬ್ ಬೆದರಿಕೆಯ ಮೇಲ್ ರವಾನೆಯಾಗಿದೆ. ಶಾಲೆಗೆ ಸ್ಥಳೀಯ ಪೊಲೀಸರು, ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಸದ್ಯ ಪೊಲೀಸರಿಂದ ಪರಿಶೀಲನೆ ಮುಂದುವರಿದಿದೆ. ಪರಿಶೀಲನೆಯಲ್ಲಿ ಇದೊಂದು ಹುಸಿ ಬಾಂಬ್ ಮೇಲ್ ಎನ್ನುವುದು ಧೃಢವಾಗಿದೆ

About The Author

Leave a Reply