October 21, 2025
dsgsgg

ಉಡುಪಿ: ಮುಸ್ಲಿಂ ಯುವತಿಯರನ್ನು ಅನ್ಯ ಧರ್ಮೀಯ ಯುವಕರಿಗೆ ಸೆಟ್ ಮಾಡಿ ಕೊಡುವ ದಂಧೆಯು ದ.ಕ ಜಿಲ್ಲೆಯ ವಿವಿಧ ಪರಿಸರದಲ್ಲಿ ನಡೆಯುತ್ತಿದೆ. ಇದರ ಮುಖ್ಯ ರೂವಾರಿ ಈ ಯುವತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಸಹಿತ ಸುಳ್ಳು ಸಂದೇಶವನ್ನು ಹರಡಲಾಗಿದೆ. ಇದರಿಂದ ತನ್ನ ಘನತೆಗೆ ಧಕ್ಕೆಯಾಗಿದ್ದು, ತನ್ನ ಪೋಟೋ ರವಾನಿಸಿದ ವ್ಯಕ್ತಿಯ ವಿರುದ್ಧವು ಮತ್ತು ಇನ್ನೂ ಮುಂದೆ ಇದನ್ನು ಯಾರಾದರೂ ವೈರಲ್ ಮಾಡಿದರೆ ಅವರ ವಿರುದ್ಧವು ಕೂಡ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ.

ಕೆಲವು ದಿನಗಳಿಂದ ಸುಳ್ಳು ಸುದ್ದಿಯೊಂದಿಗೆ ಮಹಿಳೆಯ ಪೋಟೋ ವೈರಲ್ ಮಾಡಿ ಮಹಿಳೆಯಾ ತೇಜೋವಧೆ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಸುಳ್ಳು ಸಂದೇಶವನ್ನು ಹರಿಯಬಿಟ್ಟು ತೇಜೋವಧೆ ಮಾಡಿರುವ ವ್ಯಕ್ತಿಯ ಹೆಸರಿನೂಂದಿಗೆ ಯುವತಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

About The Author

Leave a Reply