
ಸುರತ್ಕಲ್: ಜೂಜಾಟ ಆಡುತ್ತಿದ್ದ ಆರೋಪದಲ್ಲಿ 9 ಮಂದಿಯನ್ನು ಸಿಸಿಬಿ ಮತ್ತು ಪಣಂಬೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬೈಕಂಪಾಡಿ ರೈಲು ಮಾರ್ಗದ ಸಮೀಪದಿಂದ ಬಂಧಿಸಿದ್ದಾರೆ. ಆರೋಪಿಗಳನ್ನು ಮುಹಮ್ಮದ್ ಹನೀಫ್, ಝಾಕಿರ್ ಅಹ್ಮದ್, ವಿಲ್ಫ್ರೆಡ್ ಡಿಸೋಜ, ಅನಿಲ್ ಕುಮಾರ್, ಮುರ್ತೋಝ ಇಮಾಮ್ ಸಾಬ್, ಶಶಿ ದೇವಾಡಿಗ, ಮೈಲಾರಪ್ಪ, ರಾಯ್ ಡಯಾಸ್, ಜೋನ್ ರಾಬರ್ಟ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಆಟಕ್ಕೆ ಬಳಸಿದ್ದ 11,265 ರೂ. ನಗದು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


