March 10, 2026
WhatsApp Image 2024-05-18 at 6.16.25 PM

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜಗೌಡರಿಗೆ ಮತ್ತೆ 2 ದಿನ SIT ಕಸ್ಟಡಿಗೆ ನೀಡಿ ಹಾಸನದ 5 ನೇ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.

ಇಂದು ಹಾಸನದ 5 ನೇ ಸಿವಿಲ್ ಕೋರ್ಟ್ ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಬಿಜೆಪಿ ಮುಖಂಡ ದೇವರಾಜೆಗೌಡಗೆ ಮತ್ತೆ ಎರಡು ದಿನ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಪೆನ್ ಡ್ರೈವ್ ಕೇಸ್ ನಲ್ಲಿ ದೇವರಾಜೇಗೌಡ ಎಂಟನೇ ಆರೋಪಿಯಾಗಿದ್ದಾರೆ. ಮತ್ತೆ 2 ದಿನ SIT ಕಸ್ಟಡಿಗೆ ನೀಡಿ ಮೇ 20ರ ಸಂಜೆ 5 ಗಂಟೆಗೆ ಕೋರ್ಟಿಗೆ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದೇವರಾಜೇಗೌಡ ನನ್ನು ಒಂದು ದಿನ ಎಸ್‌ಐಟಿ ವಶಕ್ಕೆ ಕೋರ್ಟ್ ನೀಡಿತ್ತು. ಇದೀಗ ಎಸ್‌ಐಟಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ದೇವರಾಜೆಗೌಡನನ್ನು ಕೋರ್ಟಿಗೆ ಕರೆತಂದಿದ್ದಾರೆ.ಹಾಸನದ 5ನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ ಎರಡು ದಿನ ಕಷ್ಟ ಅಡಿಗ ನೀಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.

About The Author

Leave a Reply