ನಮ್ಮ ಸರಕಾರ ಯಾವುದೇ ಮೀಸಲಾತಿ ಕಿತ್ತು ಹಾಕಿಲ್ಲ- ಸಿಎಂ

ಬೆಂಗಳೂರು: ಸರ್ಕಾರ ಬಂದು ಒಂದು ವರ್ಷ ಆಯಿತು. ನೀತಿ ಸಂಹಿತೆಯಿಂದಾಗಿ ಸೆಲೆಬ್ರೇಟ್ ಮಾಡಲಾಗಲಿಲ್ಲ.‌ ಪ್ರೆಸ್‌ಕ್ಲಬ್ ಆಹ್ವಾನದ ಮೇರೆಗೆ ಇಲ್ಲಿಗೆ ಬಂದೆ ಎಂದು ಸಿಎಂ ಮಾತು ಆರಂಭಿಸಿದರು. ಕಳೆದ ವರ್ಷ ರಾಜ್ಯದ ಏಳು ಕೊಟಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಹೇಳಿದಂತೆ ಐದು ವಾಗ್ದಾನಗಳನ್ನ ಜಾರಿಗೊಳಿಸಿದ್ದೇವೆ. ಸ್ವಲ್ಪವೂ ವಿಳಂಬ ಮಾಡದೇ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೇವೆ.

ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ರೆ ಡಿಕೆಶಿ ಡಿಸಿಎಂ ಆಗಿ ಪ್ರಮಾಣ ಸ್ವೀಕರಿಸಿದರು.‌ ಅಂದೇ ಕ್ಯಾಬಿನೆಟ್ ಸೇರಿ ಐದು ಗ್ಯಾರಂಟಿ ಜಾರಿ ಮಾಡಿದೆವು. ಜೂನ್ 11ರಂದು ಶಕ್ತ ಯೋಜನೆ ಜಾರಿ ಮಾಡಲಾಯಿತು ಎಂದರು. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಹಾಗೂ ಯುವನಿಧಿ ಸೇರಿದಂತೆ ಐದು ಗ್ಯಾರಂಟಿ ಜಾರಿ ಮಾಡಲಾಯಿತು. ಅನ್ನಭಾಗ್ಯ ಜಾರಿಗೆ ಕೇಂದ್ರ ಅಕ್ಕಿ ಕೊಡಲಿಲ್ಲ.‌ ಎಫ್ ಸಿಐ ಮ್ಯಾನೇಜರ್ ಕರೆದು ಮಾತನಾಡಿದಾಗ ಅಕ್ಕಿ ದಾಸ್ತಾನಿದೆ ಕೊಡುತ್ತೇವೆಂದು ಲಿಖಿತ ವಾಗಿ ಹೇಳಿದ್ದರು. ಅದಾದ ಕೆಲ ದಿನಗಳಲ್ಲಿ ಅಕ್ಕಿ ಕೊಡಲ್ಲ ಅಂತಾ ಪತ್ರ ಬಂತು. ಯಾಕೆ ಅಂತಾ ಕೇಳಿದಾಗ, ಕೇಂದ್ರದವರಿಂದ ಕೊಡಬೇಡಿ ಅಂತಾ ಆದೇಶ ಬಂದಿದೆ ಎಂದರು.

ಆಗ ನಾವು ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ಹಣ ನೀಡಿದೆವು ಎಂದು ಸಿಎಂ ವಿವರಿಸಿದರು. ಐದು ಗ್ಯಾರಂಟಿಗಳಿಗೆ 36000 ಕೋಟಿ ಖರ್ಚು ಬಿಜೆಪಿ ಆರೋಗ್ಯಕರವಾಗಿ ಟೀಕೆ ಮಾಡಲಿ. ಲೋಕಸಭೆ ಚುನಾವಣೆವರೆಗೂ ಕೊಡ್ತಾರೆ. ಆಮೇಲೆ ನಿಲ್ಲಿಸ್ತಾರೆ ಅಂತ ಆರೋಪ ಮಾಡಿದರು. ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. ಅಭಿವೃದ್ಧಿ ಯೋಜನೆ ನಿಂತು ಹೋಗಿದೆ ಅಂತಾರೆ. ಆದರೆ, ನಾವು ಕ್ಯಾಪಿಟಲ್‌ ಎಕ್ಸ್ ಪೆಂಡಿಚರ್‌ನಲ್ಲಿ 54374 ಕೋಟಿ ಖರ್ಚು ಮಾಡುತ್ತೇವೆಂದಿದ್ದೆವು. ಆದರೆ ನಾವು 56 ಸಾವಿರಕ್ಕು ಅಧಿಕ ಕೋಟಿ ಹಣ ಖರ್ಚು ಮಾಡಿದ್ದೇವೆ. ಇದು ಯಡಿಯೂರಪ್ಪ, ವಿಜಯೇಂದ್ರ, ಅಶೋಕ್ ಗೆ ಗೊತ್ತಾಗುತ್ತೋ ಇಲ್ವೋ ಎಂದು ಸಿಎಂ ಪ್ರಶ್ನಿಸಿದರು.

ನೀರಾವರಿಗೆ 18198.34 ಕೋಟಿ ಪಿಡಬ್ಲಯುಡಿಗೆ 9645 ಕೋಟಿ ಖರ್ಚು ಮಾಡಲಾಗಿದೆ. ಖಜಾನೆ ಖಾಲಿಯಾಗಿದೆ ಅಂತಾ ಆರೋಪಾಡುತ್ತಿರೋದಕ್ಕೆ ಅರ್ಥವಿದೆಯೆ? ಖಜಾನೆ ಖಾಲಿಯಾಗಿದೆ ಅಂತ ಸುಳ್ಳು ಹೇಳುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಐವತ್ತು ಲಕ್ಷದಿಂದ ಒಂದು ಕೋಟಿ ರೂ ವರೆಗೆ ಕಾಂಟ್ರ್ಯಾಕ್ಟ ಕೊಡಬೇಕು ಅಂತ ಕಾನೂನು ಮಾಡಿದೋರು ನಾವೇ. (ಎಸ್ ಸಿ ಎಸ್ಟಿಯವರಿಗೆ) ನರೇಂದ್ರ ಮೋದಿಯವರು ಈ ಕೆಲಸವನ್ನು ಮಾಡಿದ್ದಾರ? ದಲಿತರ ಬಗ್ಗೆ ಇವರಿಗೇನು ಕಾಳಜಿ ಇದೆ? ಹಿಂದುಳಿದ ವರ್ಗದವರ ಮೀಸಲಾತಿ ಕಿತ್ತು ಮುಸಲ್ಮಾನರುಗೆ‌ ಕೊಡುತ್ತಾರೆ ಅಂತಾ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಯಾವ ಯಾವ ಪ್ರವರ್ಗಗಳಿಗೆ ಎಷ್ಟು ಎಷ್ಟು ಮೀಸಲಾತಿ ಇದೆ ಅಂತಾ ವಿವರಿಸಿದರು. 1994 ರಲ್ಲಿ 2ಬಿ ಮೀಸಲಾತಿ ಪ್ರಕಾರ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನಿಗದಿಯಾಗಿದೆ. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಿಂದುಳಿದವರ ಮೀಸಲಾತಿ ಕಿತ್ತು ಹಾಕಲಾಗಿದೆ ಎಂದರು. ಇದೆಲ್ಲ ಅಪ್ಪಟ ಸುಳ್ಳು ಎಂದು ಕುಟುಕಿದರು.

Leave a Reply