
ಉಳ್ಳಾಲ: ಮರದ ಮಿಲ್ ನ ಆವರಣ ಗೋಡೆ ಕುಸಿದು ಎರಡು ಕಾರುಗಳು ಜಖಂಗೊಂಡ ಘಟನೆ ದೇರಳಕಟ್ಟೆಯ ಆಸ್ಪತ್ರೆಯೊಂದರ ಬಳಿ ಶನಿವಾರ ಸಂಜೆ ನಡೆದಿದೆ.



ಗೋಡೆ ಕುಸಿದ ವೇಳೆ ಕಾರುಗಳಲ್ಲಿ ಯಾರೂ ಇಲ್ಲದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಆವರಣ ಗೋಡೆ ಬದಿಯಲ್ಲಿ ಎರಡು ವಾಹನಗಳು ಇದ್ದ ಕಾರಣ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಪರಿಣಾಮ ಆವರಣ ಗೋಡೆಯು ಸಂಪೂರ್ಣ ಒದ್ದೆಯಾಗಿ ಕುಸಿದು ಬಿದ್ದಿದೆ. ಇನ್ನು ಆವರಣ ಗೋಡೆಯ ಪಕ್ಕದಲ್ಲಿ ಆಸ್ಪತ್ರೆಗೆ ಬಂದಿದ್ದವರು ಕಾರು ನಿಲ್ಲಿಸಿದ್ದರು. ಕಾರುಗಳು ಆವರಣ ಗೋಡೆಯ ಕಲ್ಲುಗಳ ಅಡಿ ಸಿಲುಕಿದ್ದು, ಕಾರುಗಳ ಗಾಜುಗಳು ನಜ್ಜುಗುಜ್ಜಾಗಿದೆ. ಇನ್ನು ಸ್ಥಳದಲ್ಲಿದ್ದ ಬೇಲ್ ಪುರಿ ಮಾರಾಟದ ಕೈಗಾಡಿಗೂ ಹಾನಿಯುಂಟಾಗಿದೆ.