ಸೌದಿ ಅರೇಬಿಯಾದ ದಮಾಮ್‌ನಲ್ಲಿ ಬೆಂಕಿ ಅವಘಡ ಮೂಡುಬಿದಿರೆ ಮೂಲದ ಮಗು ಸಾವು..!

ಮೂಡುಬಿದಿರೆ: ಸೌದಿ ಅರೇಬಿಯಾದ ದಮಾಮ್‌ನಲ್ಲಿ ನಡೆದ ಬೆಂಕಿ ದುರಂತದಲ್ಲಿ ಕರಾವಳಿ ಮೂಲದ ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂರು ವರ್ಷದ ಮಗುವೊಂದು ಮೃತಪಟ್ಟು, ಮೂವರು ತೀವ್ರ ಅಸ್ವಸ್ಥರಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ದಮಾಮ್‌ನ ಅದಮಾ ಎಂಬಲ್ಲಿಯ ಲುಲು ಮಾಲ್‌ ಹಿಂಭಾಗದಲ್ಲಿರುವ ಅಲ್‌ ಹುಸೇನಿ ಕಾಂಪೌಂಡ್‌ನ‌ಲ್ಲಿ ಮೂಡುಬಿದಿರೆಯ ಕೋಟೆಬಾಗಿಲು ಖೀಲಾ ಸುನ್ನಿ ಜಾಮಿಯಾ ಮಸೀದಿ ಎದುರಿನ ಮನೆಯ ಶೇಖ್‌ ಫಹಾದ್‌ ಮತ್ತು ಅವರ ಕುಟುಂಬ ವಾಸಿಸುತ್ತಿದ್ದುವಾಸವಾಗಿತ್ತು. ಇವರು ರಾತ್ರಿ ಮಲಗಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಫಹದ್‌ ಅವರ ಮಗು ಸಾಯಿಕ್‌ ಶೇಖ್‌ (2) ಉಸಿರುಗಟ್ಟಿ ಮೃತಪಟ್ಟಿದೆ.

ಫಹದ್‌, ಅವರ ಪತ್ನಿ ಸಲ್ಮಾ ಕಾಝಿ ಮತ್ತು ಪುತ್ರ ಶಾಹಿದ್‌ ಶೇಖ್‌(6) ಹೊಗೆಯಿಂದ ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾಗಿದ್ದು ಅವರನ್ನು ಸಮೀಪದ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದು ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಧ್ಯದ ಪ್ರಕಾರ ಮನೆಯೊಳಗಿದ್ದ ರೆಫ್ರಿಜರೇಟರ್‌ನಿಂದ ಶನಿವಾರ ರಾತ್ರಿ ಅನಿಲ ಸೋರಿಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. . ಫಹಾದ್‌ ಕುಟುಂಬವು ಕಳೆದ ಆರು ತಿಂಗಳಿನಿಂದ ಈ ಕಟ್ಟಡದಲ್ಲಿ ವಾಸವಾಗಿದೆ.

Leave a Reply