Visitors have accessed this post 642 times.

ಪುರುಷರ ಕಟ್ಟೆ ಬಿಂದು ಪ್ಯಾಕ್ಟರಿಯಲ್ಲಿ ಅಕ್ರಮವಾಗಿ ಕೊಳವೆ ಬಾವಿ ಕೊರೆತ ಪ್ರಶ್ನಿಸಿದ SDPI ನರಿಮೊಗರು ಬ್ಲಾಕ್ ಅಧ್ಯಕ್ಷ ಮತ್ತು ಸ್ಥಳೀಯರ ಮೇಲೆ ಕಲ್ಲು ತೂರಾಟ ಮತ್ತು ಹಲ್ಲೆಗೆ ಯತ್ನ SDPI ಖಂಡನೆ

Visitors have accessed this post 642 times.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಹೆಸರಾಂತ ಸಂಸ್ಥೆಯಾದ ಮೇಘ ಇಂಡಸ್ಟ್ರಿಸ್ ಬಿಂದು ಕಂಪೆನಿಯಲ್ಲಿ ಅಕ್ರಮವಾಗಿ ಹಲವು ಕೊಳವೆ ಬಾವಿಯನ್ನು ಕೊರೆಯಲಾಗಿದ್ದು ಇದರಿಂದ ಗ್ರಾಮದ ಸುತ್ತಮುತ್ತಲಿನ ಪರಿಸರದ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದು ಇದರ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಎಚ್ಚರಿಕೆ ಕೊಟ್ಟಿದ್ದರು ಅದನ್ನು ನಿರ್ಲಕ್ಷಿಸಿ “ಬೋರ್ ರೀ ಪ್ರೆಶ್“ ಎಂಬ ಹೆಸರಿನಲ್ಲಿ ಅನುಮತಿಯನ್ನು ಪಡೆದು ಎರಡೆರಡು ಬೋರೆವೆಲ್ ಗಾಡಿಯನ್ನು ತರಿಸಿ ಹೊಸದಾಗಿ ಕೊಳವೆಬಾವಿಯನ್ನು ಕೊರೆದು ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಮೊನ್ನೆಯಷ್ಟೇ ಅಕ್ರಮವಾಗಿ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ,ಪುತ್ತೂರು ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು ಇಂದು ಮತ್ತೆ ಅಕ್ರಮವಾಗಿ ಕೊಳವೆ ಬಾವಿ ಕೊರೆಯಲು ಸಿದ್ದತೆ ನಡೆಸುತ್ತಿದ್ದಾಗ ಹಲವು ಸಮಯಗಳಿಂದ ಸಾರ್ವಜನಿಕರೊಂದಿಗೆ ಈ ಅಕ್ರಮದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ SDPI ನರಿಮೊಗರು ಬ್ಲಾಕ್ ಅಧ್ಯಕ್ಷರಾದ ಸಲೀಂ ಮಾಯಾಂಗಳ ಮತ್ತು ನೆರೆದಿದ್ದವರ ಮೇಲೆ ಕಲ್ಲು ತೂರಾಟ ಮತ್ತು ಹಲ್ಲೆಗೆ ಯತ್ನ ನಡೆದಿದ್ದು ಇದನ್ನು SDPI ನರಿಮೊಗರು ಬ್ಲಾಕ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಯಾವುದೇ ರೀತಿಯ ಬೆದರಿಕೆ ಮತ್ತು ಅಕ್ರಮದಿಂದ ಸಾರ್ವಜನಿಕರ ಪರವಾದ ನಮ್ಮ ಹೋರಾಟವನ್ನು ದಮನಿಸಲು ನಿಮ್ಮಿಂದ ಸಾಧ್ಯವಿಲ್ಲ ಮತ್ತು ಮುಂದಿನ ದಿನಗಳಲ್ಲಿ ಈ ಅಕ್ರಮದ ವಿರುದ್ಧ ನಾಗರೀಕರೊಂದಿಗೆ ಸೇರಿಕೊಂಡು ನಡೆಯುವ ಎಲ್ಲಾ ಹೋರಾಟಗಳಲ್ಲಿ ಪಕ್ಷ ಬೆಂಬಲಿಸಲಿದೆ ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈ ಕೊಗೊಳ್ಳಬೇಕಾಗಿ ಈ ಮೂಲಕ ಎಚ್ಚರಿಸುತ್ತಿದ್ದೇವೆ.

ಅಶ್ರಫ್ ಸರ್ವೆ
ಕಾರ್ಯದರ್ಶಿ SDPI ನರಿಮೊಗರು ಬ್ಲಾಕ್ ಸಮಿತಿ

Leave a Reply

Your email address will not be published. Required fields are marked *