ಮಂಗಳೂರು: ಮಳೆಗಾಲದಲ್ಲಿ ಪಾಲಿಕೆ ವ್ಯಾಪ್ತಿಯೊಳಗೆ ಭೂ ಅಗೆತ ನಿಷೇಧ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ ನಿಂದ ಸೆಪ್ಟೆಂಬ‌ರ್ ವರೆಗೆ ಅತ್ಯಧಿಕ ಮಳೆ ಆಗುವ ಸಾಧ್ಯತೆ ಇರುವುದರಿಂದ ಕಟ್ಟಡಗಳ ಮೂಲಕ ಯಾವುದೇ ರೀತಿಯ ದುರಂತ ಅಥವಾ ಪ್ರಾಣಪಾಯ ಸಂಭವಿಸಿದಲ್ಲಿ ಕಟ್ಟಡದ ಮಾಲಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆಯುಕ್ತ ಆನಂದ್ ಸಿ.ಎಲ್. ತಿಳಿಸಿದ್ದಾರೆ. ಶಿಥಿಲಗೊಂಡು ಬೀಳುವ ಸಾಧ್ಯತೆ ಇರುವ ಯಾವುದೇ ಕಟ್ಟಡಗಳನ್ನು ಅಥವಾ ಕಟ್ಟಡದ ಭಾಗಗಳನ್ನು ಸೂಕ್ತ ಮುಂಜಾಗ್ರತಾ ಕ್ರಮವಹಿಸಿ ಅಕ್ಕಪಕ್ಕದ ಆಸ್ತಿಗಳಿಗೆ ಹಾನಿ ಯಾಗದಂತೆ ತೆರವುಗೊಳಿಸಬೇಕು. ಜೂನ್ 1ರಿಂದ ಸೆಪ್ಟೆಂಬರ್ ತಿಂಗಳೊಳಗೆ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಅಭಿವೃದ್ಧಿ ಸಂಬಂಧ ನೆಲವನ್ನು ಅಗೆಯಬಾರದು ಹಾಗೂ ಮಳೆಗಾಲ ಮುಗಿದ ನಂತರ ಕಾಮಗಾರಿಯನ್ನು ಪ್ರಾರಂಭಿಸಬೇಕು. ಗುಡ್ಡವನ್ನು ಅಗೆದು ಜಮೀನನ್ನು ಸಮತಟ್ಟುಗೊಳಿಸಿ, ಮಣ್ಣು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply