
ಮಂಗಳೂರು ಕರ್ನಾಟಕ ರಾಜ್ಯ ಸರಕಾರವು ಹೊರಗುತ್ತಿಗೆಯಲ್ಲಿ ಮೀಸಲಾತಿಯನ್ನು ಘೋಷಿಸಿದ್ದು ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷರಾದ ಸಿ ಅಬ್ದುಲ್ ರೆಹ್ಮಾನ್ ಸ್ವಾಗತಿಸಿದ್ದಾರೆ
ಹೊರಗುತ್ತಿಗೆ ಮೀಸಲಾತಿ ಮುಸ್ಲಿಂ ಲೀಗಿನ ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ರಾಜ್ಯ ಸರಕಾರದ ನಿರ್ಣಯವನ್ನು ಸ್ವಾಗತಿಸುವುದರೊಂದಿಗೆ ಈ ಬಗ್ಗೆ ಸಾರ್ವತ್ರಿಕವಾಗಿ ಅರಿವು ಮೂಡಿಸಲು ರಾಜ್ಯ ಸರ್ಕಾರ ವಖ್ಫ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪತ್ರಿಕಾ ಹೇಳಿಕೆಯ ಮೂಲಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಅಧ್ಯಕ್ಷ ಸಿ ಅಬ್ದುಲ್ ರೆಹ್ಮಾನ್ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ


