October 26, 2025
WhatsApp Image 2024-05-30 at 12.52.16 PM

ನೈಋತ್ಯ ಪದವೀಧರರ ಕ್ಷೇತ್ರದ ಭಾಗವಾದ ಕಾಫಿ ನಾಡು ಕೊಡಗು ಜಿಲ್ಲೆ ತನ್ನ ಪ್ರಾಕೃತಿಕ ಸೊಬಗು ಮತ್ತು ವಿಶಿಷ್ಟ ಸಂಸ್ಕೃತಿ ಪರಂಪರೆಯಿಂದ ದೇಶದಲ್ಲೇ ಹೆಸರುವಾಸಿಯಾಗಿದ್ದು ದೇಶದ ಸೇನೆಗೆ ಇಬ್ಬರು ಮಹಾನ್ ನಾಯಕರುಗಳನ್ನು ,ಫೀಲ್ಡ್ ಮಾರ್ಶಲ್ ಜನರಲ್ ಕರಿಯಪ್ಪ,ಜನರಲ್ ತಿಮ್ಮಯ್ಯ ಅವರನ್ನು ಹಾಗೂ ಸಾವಿರಾರು ಮಹಾನ್ ಸೇನಾನಿಗಳನ್ನು ಕೊಡುಗೆಯಾಗಿ ನೀಡಿದ್ದ ನೆಲೆ ಇದು.ಇಂದು ನಿರಂತರ ಮಾನವ ಹಸ್ತಕ್ಷೇಪದಿಂದಾಗಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪಗಳು ಆಗುತ್ತಿದ್ದು,ಕೊಡವ ನಾಡು ಮತ್ತು ಇಲ್ಲಿನ ಪರಿಸರ ಅಪಾಯದಲ್ಲಿ ಸಿಲುಕಿಕೊಂಡಿದೆ.ಕೊಡಗಿನ ಪ್ರಾಕೃತಿಕ ಸೊಬಗನ್ನು ಪರಿಸರವನ್ನು ಉಳಿಸುವ ಸಮತೋಲಿತ ನೀತಿಯೊಂದನ್ನು ಅಳವಡಿಸುವುದಕ್ಕೆ ಸಮಾನ ಮನಸ್ಕರೆಲ್ಲರನ್ನು ಜತೆಗೂಡಿಸಿ ಹೋರಾಡುತ್ತೇನೆ.ಈಗಾಗಲೇ ರಾಜ್ಯ ಸರಕಾರ ಘೋಷಿಸಿರುವ ಕೊಡಗು ವಿಶ್ವವಿದ್ಯಾಲಯವನ್ನು ಸಂಪೂರ್ಣ ಮೂಲ ಸೌಕರ್ಯಗಳೊಂದಿಗೆ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ.ಕೊಡವ ,ತುಳು,ಬ್ಯಾರಿ ಭಾಷೆಗಳ ಸಾಂವಿಧಾನಿಕ ಮಾನ್ಯತೆಗಾಗಿ ಪ್ರಯತ್ನಿಸುತ್ತೇನೆ ಎಂದು ಕರ್ನಾಟಕ ವಿಧಾನಪರಿಷತ್ ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಡಾ.ಶೇಖ್ ಬಾವ ಮಂಗಳೂರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯರಾದ ಎ.ಎಸ್.ಇ ಕರೀಮ್ ಕಡಬ , ಮುಸ್ಲಿಂ ಲೀಗ್ ಕೊಡಗು ಜಿಲ್ಲಾಧ್ಯಕ್ಷರಾದ ಹಂಸ ಹಾಜಿ ಕೊಡಗು , ಕೊಡಗು ಜಿಲ್ಲಾ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ರಫೀಖ್ ವಿರಾಜಪೇಟೆ , ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ ಇದ್ದರು.

About The Author

Leave a Reply