ಜೂನ್ 1ರಂದು ಬ್ಯಾರೀಸ್ ಇಂಟೆಗ್ರೇಟೆಡ್ ಪಿ ಯು ಕಾಲೇಜು ಉದ್ಘಾಟನೆ

ಮಂಗಳೂರು: ಪ್ರತಿಷ್ಠಿತ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಬ್ಯಾರೀಸ್ ಇಂಟೆಗ್ರೇಟೆಡ್ ಪಿ ಯು ಕಾಲೇಜು ಜೂನ್ ಒಂದರಂದು ಶನಿವಾರ ಉದ್ಘಾಟನೆಯಾಗಲಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಸರಣಿಗೆ ಇದು ಹೊಸ ಸೇರ್ಪಡೆಯಾಗಲಿದೆ. ಈ ಹೊಸ ಪಿಯು ಕಾಲೇಜು ಮಂಗಳೂರು ವಿವಿ ಸಮೀಪದ ಇನೋಳಿಯಲ್ಲಿರುವ ಬ್ಯಾರೀಸ್ ನಾಲೆಜ್ ಕ್ಯಾಂಪಸ್ ನಲ್ಲಿ ಸುಸಜ್ಜಿತ ಅತ್ಯಾಧುನಿಕ ನೂತನ ಕಟ್ಟಡದಲ್ಲಿ ಶುರುವಾಗಲಿದೆ.
ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ನ ಅಧ್ಯಕ್ಷ ಹಾಗು ಆಡಳಿತ ಟ್ರಸ್ಟಿ ಆಗಿರುವ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು ಟಿ ಖಾದರ್ ಅವರು ನೂತನ ಕಾಲೇಜನ್ನು ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅವರು ಮುಖ್ಯ ಅತಿಥಿಯಾಗಿರಲಿದ್ದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ , ಪಿಯು ಇಲಾಖೆಯ ಉಪ ನಿರ್ದೇಶಕ ಜಯಣ್ಣ ಸಿ ಡಿ ಅವರು ಗೌರವ ಅತಿಥಿಗಳಾಗಿ ಭಾವಹಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಜೊತೆಜೊತೆಗೇ ಬ್ಯಾರೀಸ್ ಗ್ರೂಪ್ ನ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS), ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಎಮರ್ಜಿಂಗ್ ಸಯನ್ಸಸ್ (BIES) ಹಾಗು ಬ್ಯಾರೀಸ್ ಪಾಲಿ ಟೆಕ್ನಿಕ್ ಗಳ ವಾರ್ಷಿಕೋತ್ಸವ “ಬ್ಯಾರೀಸ್ ಉತ್ಸವ್ 2024” ಕೂಡ ನಡೆಯಲಿದೆ.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ದಶಕಗಳಿಂದ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಸೇವೆ ಸಲ್ಲಿಸುತ್ತಿವೆ. ಅತ್ಯುತ್ತಮ ಗುಣಮಟ್ಟದ, ಮಾನವೀಯ ಮೌಲ್ಯಗಳಿಗೆ ಒತ್ತು ಕೊಡುವ ಹಾಗು ಸಮಗ್ರ ವ್ಯಕ್ತಿತ್ವ ರೂಪಿಸುವಂತಹ ಶಿಕ್ಷಣ ನೀಡುತ್ತಾ ಬಂದಿರುವ ಬ್ಯಾರೀಸ್ ಇದೀಗ ಮಂಗಳೂರಿನಲ್ಲಿ ಹೊಸ ಪಿಯು ಕಾಲೇಜು ಆರಂಭಿಸಿದೆ. ಹೊಸ ಕಾಲೇಜಿನಲ್ಲಿ ಈಗಾಗಲೇ ದಾಖಲಾತಿ ಆರಂಭವಾಗಿದ್ದು ಜೂನ್ ನಲ್ಲಿ ತರಗತಿಗಳು ಪ್ರಾರಂಭವಾಗಲಿವೆ. ಇಲ್ಲಿ ವಿಜ್ಞಾನ ((PCMB ಮತ್ತು PCMC) ಹಾಗು ವಾಣಿಜ್ಯ (EBAC) ವಿಷಯಗಳಲ್ಲಿ ಪಿಯು ಕೋರ್ಸ್ ಗಳಿವೆ. ಅದ್ಭುತ ಪರಿಸರದಲ್ಲಿರುವ ಈ ಕಾಲೇಜಿನಲ್ಲಿ ಒತ್ತಡ ರಹಿತವಾಗಿ ಕಲಿಯಲು ವಿದ್ಯಾರ್ಥಿ ಕೇಂದ್ರಿತ ಸರ್ವ ಸವಲತ್ತುಗಳಿವೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅನುಭವೀ ಶಿಕ್ಷಕರು, ಕಲಿಯುವ ಅತ್ಯುತ್ತಮ ವಾತಾವರಣ, ಶಿಸ್ತುಬದ್ಧ ಹಾಗು ನೈತಿಕ ಮೌಲ್ಯಗಳ ಜೊತೆ ಕಲಿಕೆಗೆ ಪೂರಕ ಸೌಲಭ್ಯಗಳು ಇಲ್ಲಿವೆ ಎಂದು ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ನ ಅಧ್ಯಕ್ಷ ಸಯ್ಯದ್ ಬ್ಯಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply