November 28, 2025
WhatsApp Image 2024-07-09 at 2.20.24 PM

ಮಂಗಳೂರು: ದೇವಾಲಯ ಒಳಾಂಗಣಕ್ಕೆ ಬೈಕ್ ತಂದು ವ್ಯಕ್ತಿಯೋರ್ವ ದಾಂಧಲೆ ಮಾಡಿದ ಘಟನೆ ಮಂಗಳೂರಿನ ಕದ್ರಿ ದೇವಾಲಯದಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆ ಸೆಕ್ಯೂರಿಟಿ ಸಿಬ್ಬಂದಿ ಸುಧಾಕರ ಆಚಾರ್ಯ ಎಂಬಾತ ಮಹಾಪೂಜೆ ವೇಳೆ ದೇವಾಲಯದಲ್ಲಿ ಈ ರೀತಿಯ ದಾಂಧಲೆ ನಡೆಸಿದ್ದಾನೆ. ಈತ ದೇವಾಲಯ ಒಳಾಂಗಣಕ್ಕೆ ಬೈಕ್ ತಂದು ಅಣ್ಣಪ್ಪ ದೇವರ ಕತ್ತಿ(ಕಡ್ತಲೆ) ತೆಗೆದು ದಾಂಧಲೆ ಮಾಡಿದ್ದಾನೆ. ದೇವಾಲಯದ ಸೆಕ್ಯುರಿಟಿ ಇದ್ದರೂ ಒಳಾಂಗಣಕ್ಕೆ ಬೈಕ್ ತಂದು, ಅಣ್ಣಪ್ಪ ದೇವರ ಗುಡಿಯೊಳಗೆ ನುಗ್ಗಿ ಮಂಟಪದ ಮೇಲೆ ಹತ್ತಿ ದಾಂಧಲೆ ಮಾಡಿರುತ್ತಾನೆ.

ಅಣ್ಣಪ್ಪಣ ಕಡ್ತಲೆ ಮುಟ್ಟಿದ ಹಿನ್ನೆಲೆ ಶುದ್ಧೀಕರಣ ಮಾಡಲಾಗಿದೆ. ಈ ಹಿಂದೆಯೂ ಸುಧಾಕರ ಆಚಾರ್ಯ ಬೇರೆ ಎರಡು ಮೂರು ದೇವಾಲಯಗಳಿಗೆ ನುಗ್ಗಿ ದಾಂಧಲೆ ನಡೆಸಿರುತ್ತಾನೆ. ಇನ್ನು ಈತ ದೇವಾಲಯದ ಆವರಣದೊಳಗೆ ಬೈಕ್ ತಂದ ವೇಳೆ ಭಕ್ತರಿಗೂ ಗಾಯಗಳಾಗಿದೆ ಎಂದು ದೇವಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

About The Author

Leave a Reply