Visitors have accessed this post 375 times.
ಉಡುಪಿ ಜಿಲ್ಲೆಯ ಕಾಪು ಸಮೀಪ ಕಟಪಾಡಿ ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಕದ್ದೊಯ್ದ ಘಟನೆ ನಡೆದಿದೆ
ಮುಂಜಾನೆಯ ನಡುವೆ ದೈವಸ್ಥಾನಕ್ಕೆ ನುಗ್ಗಿದ ಕಳ್ಳರು ದೈವಸ್ಥಾನದ ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದಿದ್ದು ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ 4 ಸಾವಿರ ರೂಪಾಯಿ ಹಾಗೂ ಆವರಣದಲ್ಲಿರುವ ಚಾಮುಂಡಿ ಗುಡಿ ಹಾಗೂ ಕೊರಗಜ್ಜನ ಗುಡಿಯ ಬೀಗ ವನ್ನು ಮುರಿದು ಹುಂಡಿ ಯಲ್ಲಿದ್ದ 1 ಸಾವಿರ ರೂ.ಗಳನ್ನು ಕಳವುಗೈದಿದ್ದಾರೆ.
ರಾತ್ರಿ 11.20ರ ವೇಳೆಗೆ ಕಳವು ನಡೆದಿರುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ದೈವಸ್ಥಾನದ ಸದಸ್ಯ ಸುಂದರ ನೀಡಿರುವ ಮಾಹಿತಿಯಂತೆ ಅಧ್ಯಕ್ಷ ಸದಾನಂದ ನೀಡಿ ರುವ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.