October 28, 2025
tyt
ಮಂಗಳೂರು: ನಿನ್ನೆ ಬಂಧನವಾಗಿದ್ದ ನಗರದಲ್ಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರು ಪೊಲೀಸರ ಕೈಯಿಂದಲೇ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನಿನ್ನೆ(ಮಂಗಳವಾರ) ಚಡ್ಡಿ ಗ್ಯಾಂಗ್‌ನ ನಾಲ್ವರನ್ನು ಸಕಲೇಶಪುರದಲ್ಲಿ ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದರು.
ದರೋಡೆ ನಡೆಸಿದ ಬಳಿಕ ಅದೇ ಮನೆಯ ಕಾರಿನಲ್ಲಿ ಮುಲ್ಕಿ ವರೆಗೆ ಬಂದು ಕಾರನ್ನು ಅಲ್ಲಿ ಬಿಟ್ಟು ಬೆಂಗಳೂರು ಕಡೆಗೆ ಬಸ್ ನಲ್ಲಿ ಹೊರಟಿದ್ದರು.‌ಅದರಂತೆ ಕಾರು ಇಟ್ಟ ಸ್ಥಳಕ್ಕೆ ಇಂದು ಬೆಳಗ್ಗೆ ಸ್ಥಳ ಮಹಜರಿಗಾಗಿ ಪೊಲೀಸರು ಆರೋಪಿಗಳನ್ನು ಕರೆ ತಂದಿದ್ದರು.ಈ ವೇಳೆ ಇಬ್ಬರು ಪೊಲೀಸರ ಮೇಲೆ ಕೂಡ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಗಳಾದ ರಾಜು ಸಿಂಗ್ವಾನಿಯಾ ಮತ್ತು ಬಾಲಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಗ್ವಾನಿಯ (24 ವರ್ಷ), ಭೂಪಾಲ್ ನ ಮಯೂರ್ (30 ವರ್ಷ), ಬಾಲಿ (22 ವರ್ಷ), ಗುಣಾ ಜಿಲ್ಲೆಯ ವಿಕ್ಕಿ (21 ವರ್ಷ) ಎಂಬ ನಾಲ್ವರು ಬಂಧಿತ ಆರೋಪಿಗಳು ಎಂದು ತಿಳಿಯಲಾಗಿದೆ.

About The Author

Leave a Reply