Visitors have accessed this post 399 times.
ಬೆಳ್ಳಂ ಬೆಳಗ್ಗೆ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ ಘಟನೆ ಜು. 11ರ ಗುರುವಾರ ನಡೆದಿದೆ.
ಬಿಬಿಎಂಪಿ ಸೂಪರಿಂಡೆಂಟ್ ಇಂಜಿನಿಯರ್ ಜಗದೀಶ್ ಹಾಗೂ ಪಿಡಬ್ಲ್ಯೂಡಿ ನಿವೃತ್ತ ಸೂಪರಿಂಡೆಂಟ್ ಇಂಜಿನಿಯರ್ ರವೀಂದ್ರಪ್ಪ ಎಂಬ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಸೂಪರಿಂಡೆಂಟ್ ಇಂಜಿನಿಯರ್ ಜಗದೀಶ್ ಬಿಬಿಎಂಪಿಯಿಂದ ಇತ್ತೀಚೆಗೆ ಭದ್ರಾ ಮೇಲ್ದಂಡೆಗೆ ವರ್ಗಾವಣೆಯಾಗಿದ್ದರು. ಅವರ ಚಿತ್ರದುರ್ಗದ ಮನೆ ಸೇರಿ ದಾವಣಗೆರೆಯ ನಾಲ್ಕು ಕಡೆ ಲೋಕಾಯುಕ್ತ ರೈಡ್ ನಡೆಸಿದೆ.
ಪಿಡಬ್ಲ್ಯೂಡಿ ನಿವೃತ್ತ ಸೂಪರಿಂಡೆಂಟ್ ಇಂಜಿನಿಯರ್ ರವೀಂದ್ರಪ್ಪ ಅವರ ಹಿರಿಯೂರು ತಾಲೂಕಿನ ಸೂಗೂರು ಫಾರ್ಮ್ ಹೌಸ್, ಬೆಂಗಳೂರು ಅಪಾರ್ಟ್ ಮೆಂಟ್, ಚಿತ್ರದುರ್ಗದ ವಿನಾಯಕ, ಬಡಾವಣೆಯ ಮನೆ, ಐಮಂಗಲ ಬಳಿಯ ಬಾಟಲಿಂಗ್ ಫ್ಯಾಕ್ಟರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯ ಮೀರಿದ ಆಸ್ತಿ ಗಳಿಕೆ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.