August 30, 2025
WhatsApp Image 2024-07-19 at 9.02.55 PM (1)

ಮಲ್ಲೂರು ಗ್ರಾಮದ ಸೈನಿಕನ ಪತ್ನಿ ಚಂದ್ರವತಿ ಮತ್ತು ಅವರ ಮಗ ನಿರಂಜನ್ ಮತ್ತು ಅವರ ಕುಟುಂಬವು ವಾಸವಾಗಿದ್ದು ಮನೆಯ ಪಕ್ಕದಲ್ಲಿ ಜಲ್ಲಿಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು ಸದ್ರಿ ಕಲ್ಲಿನ ಕೋರಿಯಲ್ಲಿ ದೊಡ್ಡ ದೊಡ್ಡ ಶಬ್ದದ ಸ್ಪೋಟಗಳು ಬಳಕೆಯಾಗುತ್ತಿದ್ದು ಸದರಿ ಸ್ಪೋಟದಿಂದಾಗಿ ಕಲ್ಲುಗಳು ರಭಸವಾಗಿ ಮೇಲಕ್ಕೆ ಚಿಮ್ಮಿ ಜಮೀನಿಗೆ ಮನೆ, ಹಟ್ಟಿ ಕೊಟ್ಟಿಗೆಗೂ ಬೀಳುತ್ತಿತ್ತು ಇದರಿಂದಾಗಿ ಮನೆ ಜಖಂ ಗೊಂಡಿದ್ದು ಹಾಗೂ ದೈವಸ್ಥಾನ ಹಾಗೂ ನಾಗಸ್ಥಾನ ಗಳಿಗೆ ಹಾನಿ ಉಂಟಾಗಿದ್ದು ಸ್ಪೋಟ ಗಳಿಂದಾಗಿ ಸದ್ರಿ ಸ್ಥಳದಲ್ಲಿ ವಾಸ ಮಾಡಲು ಅನಾನುಕೂಲವಾಗಿದ್ದು ಜೀವ ಭಯ ಕಾಡುತ್ತಿದೆ.

ಸದ್ರಿ ಪ್ರದೇಶವು ಭಯಾನಕ ಪ್ರದೇಶವಾಗಿ ಮಾರ್ಪಾಡಾಗಿದ್ದು ಸದ್ರಿ ಜಲ್ಲಿ ಕೋರೆಗೆ ಬರುವ ದೊಡ್ಡ ದೊಡ್ಡ ವಾಹನಗಳಿಂದ ರಸ್ತೆಗಳು ಕೂಡ ಹಾಳಾಗಿ ಇದರಲ್ಲಿ ಜನಸಾಮಾನ್ಯರಿಗೆ ಹಾಗೂ ಸಾಮಾನ್ಯವಾಗಿ ಓಡಾಡಲು ದುಸ್ತರವಾಗಿರುತ್ತದೆ ಅದು ಅಲ್ಲದೆ ಜಲ್ಲಿಕೋರೆಯಿಂದ ಬರುವ ಜಲ್ಲಿನ ಹುಡಿ ಹಾಗೂ ಕಲ್ಲಿನ ತುಂಡುಗಳು ಕೃಷಿ ಜಮೀನಿಗೆ ಕೂಡ ಬಂದು ಸೇರುತ್ತಿದ್ದು ಕೃಷಿ ನಡೆಸಲು ಕೂಡ ಅನಾನುಕೂಲವಾಗುತ್ತಿದೆ ಹಾಗೂ ಭಯಾನಕ ಸ್ಫೋಟಗಳಿಂದಾಗಿ ಮನೆಯಲ್ಲಿ ಈಗಾಗಲೇ ಬಿರುಕು ಬಿಟ್ಟಿದ್ದು ಹಟ್ಟಿ ಕೊಟ್ಟಡಿಗಳಲ್ಲಿರುವ ಜಾನುವಾರುಗಳು ಕೂಡ ಸ್ಪೋಟದಿಂದ ಭಯಗೊಂಡು ದಿಕ್ಕ ಪಾಲಾಗಿ ಓಡುತ್ತಿದ್ದು ಜಾನುವಾರುಗಳು ಕೆರೆ, ಕಾಲುವೆ, ತೋಡುಗಳಿಗೆ ಬೀಳುತ್ತಿದ್ದು ನಮ್ಮ ಹಾಲು ಕೊಡುವ ದನ ಕೂಡ ಸತ್ತು ಹೋಗಿದ್ದು ತುಂಬಾ ನಮ್ಮ ಸ್ಥಿತಿ ಚಿಂತಾಜನಕ ವಾಗಿದೆ.

ನಮ್ಮ ರಕ್ಷಣೆಗೆ ಯಾರು ಇಲ್ಲವರಾಗಿದ್ದಾರೆ. ಯಾವ ಇಲಾಖೆವು ನೊಂದ ಕುಟುಂಬಕ್ಕೆ ಬೆಂಬಲ ನೀಡುವುದಿಲ್ಲ ದಯವಿಟ್ಟು ತಮ್ಮ ಸಂಘಟನೆ ನಮ್ಮ ಬೆಂಬಲಕ್ಕೆ ನಿಂತು ಹೋರಾಟ ನಡೆಸಬೇಕಾಗಿ ಸೈನಿಕನ ಪತ್ನಿ ಮತ್ತು ಮಗ ಮನವಿ ಮಾಡಿ ಕಣ್ಣೀರು ಹಾಕುತ್ತಿರುವುದು ಎಲ್ಲರ ಮನಸ್ಸು ಕಳಕುವಂತಿತ್ತು. ಮನವಿಗೆ ಸ್ಪಂದಿಸಿದ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಸೇರಿದಂತೆ ಮತ್ತಿತರ ನ್ಯಾಯಯುತ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಂಡು ಪರಿಹಾರ ಹುಡುಕಲು ಪ್ರಯತ್ನಿಸುವುದಾಗಿ ನೊಂದ ಕುಟುಂಬಕ್ಕೆ ಭರವಸೆ ನೀಡಿರುತ್ತಾರೆ

About The Author

Leave a Reply