ಮಂಗಳೂರಿನಲ್ಲಿ ಖಾಸಗಿ ಚಾನೆಲ್ ಒಂದರಲ್ಲಿ ಕ್ಯಾಮೆರಾಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿರೇಶ್ ಕಡ್ಲಿಕೊಪ್ಪ ಅವರು ನಿಧನರಾಗಿದ್ದಾರೆ.
ಮೂಲತಃ ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದವರಾಗಿದ್ದ ವಿರೇಶ್ ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು ಎಲ್ಲರೊಂದಿಗೆ ಒಳ್ಳೆಯ ಒಡನಾಟದಲ್ಲಿದ್ದರು. ಇತ್ತೀಚೆಗೆ ಟಿವಿ 5 ಚಾನೆಲ್‌ನಲ್ಲಿ ಕ್ಯಾಮೆರಾಮೆನ್ ಆಗಿ ಜಾಯಿನ್ ಆಗಿದ್ದರು. ಮೀಡಿಯಾ 1 ಕನ್ನಡ ಚಾನಲ್ ನಲ್ಲಿಯೂ ಕ್ಯಾಮೆರಾಮೆನ್ ಆಗಿ ಕರ್ತವ್ಯ ನಿರ್ವಹಿಸಿದ್ದರು
ಕಳೆದ ಜುಲೈ 7 ರಂದು ಹುಟ್ಟು ಹಬ್ಬ ಹಾಗೂ ಊರ ಜಾತ್ರೆಯಲ್ಲಿ ಭಾಗವಹಿಸಲು ಊರಿಗೆ ತೆರಳಿದ್ದ ವಿರೇಶ್ ನಿ*ಧನರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. ನಿಧನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮಂಗಳೂರು ಪತ್ರಕರ್ತರ ಸಂಘದಲ್ಲಿ ಸದಸ್ಯರಾಗಿದ್ದ ವಿರೇಶ್ ಕಡ್ಲಿಕೊಪ್ಪ ನಿಧನಕ್ಕೆ ಜಿಲ್ಲೆಯ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.