ಬಾಗಲಕೋಟೆ ; ಜಿಲ್ಲೆಯಲ್ಲಿ ಮಹಿಳೆಯೊಬ್ಬರು 12 ಕಾಲ್ಬೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದ್ದು, ಇದೀಗ ಎಲ್ಲರ ಆಕರ್ಷಣೆಗೆ ಕೇಂದ್ರವಾಗಿದೆ.
ಬಾಗಲಕೋಟೆ, ಜುಲೈ 20: ಮಹಿಳೆಯೊಬ್ಬರು 12 ಕಾಲ್ಬೆರಳು, 13 ಕೈಬೆರಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಆರೋಗ್ಯವಾಗಿದ್ದು, ಇದೀಗ ಎಲ್ಲರ ಆಕರ್ಷಣೆಗೆ ಕೇಂದ್ರವಾಗಿದೆ.
ಈ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ನಡೆದಿದೆ. ಮಗುವಿನ ಬಲಗೈಗೆ 6, ಎಡಗೈಗೆ 7 ಮತ್ತು ಎರಡು ಕಾಲಿನಲ್ಲಿ ಕೂಡ ತಲಾ 6 ಬೆರಳುಗಳಿವೆ.
ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಯಾವುದೇ ತೊಂದರೆಗಳು ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ತಾಯಿ ಗರ್ಭಿಣಿ ಆಗುವ ಸಂದರ್ಭದಲ್ಲಿ ಪಡೆಯುವ ಕ್ರೋಮೋಸೋಮ್‌ಗಳಲ್ಲಿ ಇಂತಹ ಗುಣಗಳಿದ್ದರೆ ಇಂತಹ ಮಗು ಹುಟ್ಟುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಮಕ್ಕಳ ಭಾಗ್ಯ ಕರುಣಿಸುವಂತೆ ಕುಂದರಗಿಯ ಭುವನೇಶ್ವರಿ ದೇವಿಗೆ ನನ್ನ ಹೆಂಡತಿ ಹರಹೆ ಹೊತ್ತಿದ್ದಳು. ಹರಕೆ ಹೊತ್ತ 4ನೇ ವಾರದಲ್ಲಿಯೇ ಗರ್ಭಿಣಿಯಾದಳು ಎಂದು ಮಗುವಿನ ತಂದೆ ಗುರಪ್ಪ ಸಂತಸ ಹಂಚಿಕೊಂಡಿದ್ದಾರೆ. ಇದೀಗ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದಂತೆ ಈ ಮಗುವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.