August 30, 2025
WhatsApp Image 2024-07-25 at 9.10.23 AM

ಮಂಗಳೂರು: ರಾಜಕೀಯ ಮೈಲೇಜ್ ಪಡೆಯಲು ಹೋಗಿ ಮತ್ತೆ ಶಾಸಕ ಹರೀಶ್ ಪೂಂಜ ಎಡವಟ್ಟು ಮಾಡಿಕೊಂಡಿದ್ದಾರೆ. ಸರಕಾರದ ಆದೇಶದ ವಿರುದ್ಧ ಹೋರಾಟ ಮಾಡಲು ಹೋದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಹರೀಶ್ ಪೂಂಜ ಹೇಳಿಕೆಯಿಂದ ಇಷ್ಟು ದಿನ ಎಲ್ಲಾ ಶಾಲೆಗಳಲ್ಲಿ ಸುಖವಾಗಿ ನಡೆಯುತ್ತಿದ್ದ ಗಣೇಶೋತ್ಸವ ,ಕೃಷ್ಣ ಜನ್ಮಾಷ್ಟಮಿಗೆ ಸಂಕಷ್ಟ ಎದುರಾಗಿದೆ.

ಈ ಮೂಲಕ ಮೈಲೇಜ್ ಪಡೆಯಲು ಹೋಗಿ ಇಲ್ಲದ ಧರ್ಮ ವಿವಾದವನ್ನ ನಿರ್ಮಿಸಲು ಹೋದ ಬಿಜೆಪಿ ಶಾಸಕನಿಗೆ ಮುಖಭಂಗವಾಗಿದೆ. ಸರ್ಕಾರಿ ಶಾಲೆ ಮತ್ತು ಕ್ಯಾಂಪಸ್ ಗಳಲ್ಲಿ ಧಾರ್ಮಿಕ ಆಚರಣೆ ಬಿಜೆಪಿ ಸರ್ಕಾವೇ ನಿಷೇಧ ಹೇರಿತ್ತು. ಇದರ ವಿರುದ್ಧ ಇದೀಗ ಹರೀಶ ಪೂಂಜಾ ಮಾತನಾಡಿ ಮುಖಭಂಗ ಅನುಭವಿಸುವಂತಾಗಿದೆ. 2013 ರ ಸಂಧರ್ಭದಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ,  ಸರ್ಕಾರಿ ಶಾಲೆ ಮತ್ತು ಕ್ಯಾಂಪಸ್ ಗಳಲ್ಲಿ ಧಾರ್ಮಿಕ ಆಚರಣೆ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಇದೇ ಆದೇಶದ ಅನ್ವಯ ದ.ಕ ಡಿಡಿಪಿಐ ಸುತ್ತೋಲೆ ಹೊರಡಿಸಿದ್ದರು. ಆಗ ಸಿಎಂ ಸಿದ್ಧರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಶಾಸಕ ಪೂಂಜಾ ಬಿಂಬಿಸಿದ್ದರು. ಪೂಂಜಾ ಹೇಳಿಕೆಯಂತೆ ಇಡೀ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಹೋರಾಟ ಮಾಡಿತ್ತು. ಇದೀಗ ಬಿಜೆಪಿ ಸರ್ಕಾರದ್ದೇ ಆದೇಶ ಎಂಬ ಮಾಹಿತಿ ಬಹಿರಂಗಗೊಂಡಿದೆ. ಸರ್ಕಾರದ ಆದೇಶವಿದ್ದರೂ ಶಾಲಾ ಮೈದಾನದಲ್ಲಿ ಗಣೇಶೋತ್ಸವ ಮಾಡುತ್ತಿದ್ದ ಸಂಘಟನೆಗಳು. ಆದರೆ ಪೂಂಜಾ ಎಬ್ಬಿಸಿದ ವಿವಾದದಿಂದ ಅಡಕತ್ತರಿಯಲ್ಲಿ ಸಂಘಟಕರು ಸಿಲುಕಿದ್ದಾರೆ. ಈ ಹಿಂದೆ ಕೆಡಿಪಿ ಸಭೆಯಲ್ಲಿ ಕೋಳಿ ಅಂಕಕ್ಕೆ ಅವಕಾಶ ಕೋರಿ ಮುಖಭಂಗ ವಾಗಿತ್ತು. ಪೂಂಜ ಹೇಳಿಕೆ ಬೆನ್ನಲ್ಲೇ ಸಾಂಪ್ರಾದಾಯಿಕ ಕೋಳಿ ಅಂಕಕ್ಕೂ ಸಂಕಷ್ಟ ಎದುರಾಗಿತ್ತು.

About The Author

Leave a Reply