ಮಂಗಳೂರು ಹಾಗೂ ಅಬುದಾಭಿ ನಡುವೆ ಜುಲೈ 22ರಿಂದ ಹೆಚ್ಚುವರಿ ವಿಮಾನ ಹಾರಾಟ ಆರಂಭ

ಮಂಗಳೂರು: ಮಂಗಳೂರು ಹಾಗೂ ಅಬುದಾಭಿ ನಡುವೆ ಜುಲೈ 22 ರಿಂದ ಹೆಚ್ಚುವರಿ ವಿಮಾನ ಹಾರಾಟ ಆರಂಭವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಬುಧಾಬಿಗೆ ಹೆಚ್ಚುವರಿ ಹಾರಾಟ ನಡೆಸಲಿದೆ. ಅಬುದಾಭಿಗೆ ರಾತ್ರಿ 8:15 ಕ್ಕೆ ಹೊರಟರೆ, ಬೆಳಗ್ಗೆ 5:20ಕ್ಕೆ ಬರಲಿದೆ. ಈ ಹೊಸ ವಿಮಾನ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ನಿರ್ಗಮಿಸಲಿದೆ. ಅಬುದಾಭಿ ಮಾತ್ರವಲ್ಲದೆ ಬಹರೇನ್, ದುಬೈ, ದಮನ್, ದೋಹಾ, ಜೆಡ್ಡಾ, ಕುವೈತ್ ಮತ್ತು ಮಸ್ಕತ್‌ಗಳಿಗೂ ಏರ್ ಇಂಡಿಯಾ ವಿಮಾನ ಸಂಚಾರ ಇರುತ್ತದೆ. ಆ.9 ರಿಂದ ಇಂಡಿಗೋ ವಿಮಾನ ಕೂಡ ಅಬುದಾಭಿಗೆ ದೈನಂದಿನ ವಿಮಾನಯಾನ ಪ್ರಾರಂಭಿಸುವ ಮೂಲಕ ಸ್ಪರ್ಧೆ ಹೆಚ್ಚಿಸಲಿದೆ. ಮಂಗಳೂರಿನಿಂದ ವಾರಕ್ಕೆ ನಾಲ್ಕು ವಿಮಾನಗಳು ದುಬೈಗೆ ಸಂಚರಿಸಲಿವೆ. ಅಬುದಾಭಿಯಿಂದ ಸಂಜೆ 4 ಗಂಟೆಗೆ ಮಂಗಳೂರಿಗೆ ಆಗಮಿಸಲಿದ್ದು, ರಾತ್ರಿ 9.40 ಕ್ಕೆ ಅಬುದಾಭಿಗೆ ಮರಳಲಿದೆ.

Leave a Reply